ಚಿತ್ರದುರ್ಗ: ಜಿಲ್ಲೆಯಲ್ಲಿ 6 ವರ್ಷದ ಬಾಲಕನೊಬ್ಬ ಆಟವಾಡುವ ವಯಸ್ಸಿಲ್ಲಿ ಕೃಷಿಯಲ್ಲೂ ಸೈ, ಓದಿನಲ್ಲೂ ಮುಂದಿದ್ದಾನೆ. ಚಿತ್ರದುರ್ಗದ ಬಾಲಕನೊಬ್ಬ ಶಾಲೆಯ ಮೆಟ್ಟಿಲು ಹತ್ತಿಲ್ಲ, ಆನ್‍ಲೈನ್ ಪಾಠಾನೂ ಕೇಳಿಲ್ಲ ಆದರೂ ಇವನು ಪ್ರತಿಭಾವಂತನಾಗಿದ್ದಾನೆ. ಆಟವಾಡುವ ವಯಸ್ಸಿಲ್ಲಿ ಕೃಷಿ, ಓದು ಎರಡರಲ್ಲಿಯೂ ಸೈ ಎನಿಸಿಕೊಂಡಿದ್ದಾನೆ. ವಯಸ್ಸಿಗೂ ಮೀರಿದ ಜ್ಞಾನಾರ್ಜನೆ ಸಂಪಾದಿಸಿದ್ದಾನೆ. ಈತನ ಪ್ರತಿಭೆಯನ್ನು ನೆರೆಹೊರೆಯವರು ಮೆಚ್ಚಿಕೊಂಡಾಡುತ್ತಿದ್ದಾರೆ.
Advertisement
ಚಿತ್ರದುರ್ಗ ತಾಲೂಕು ನರೇನಹಾಳ್ ಗ್ರಾಮದ ಕೃಷ್ಣಪ್ಪ, ಹನುಮಕ್ಕ ದಂಪತಿಯ ಪುತ್ರ ಚಂದನ್ ಈ ಪ್ರತಿಭಾವಂತ ಬಾಲಕ. ಈ ಬಾಲಕನಿಗೆ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ತಾಲೂಕುಗಳ ಹೆಸರನ್ನು ಕೇಳಿದರೆ ಹರಳು ಹುರಿದಂತೆ ಹೇಳುತ್ತಾನೆ. ಕವಿ ಮಹಾಶಯರ ಗ್ರಂಥ, ರಾಜ್ಯವನ್ನಾಳಿದ ಮಂತ್ರಿ-ಮಹೋದಯರ ಹೆಸರನ್ನು ಹೇಳುತ್ತಾನೆ.
ಪ್ರಪಂಚದ ಪ್ರತಿಯೊಂದು ದೇಶಗಳ ಹೆಸರು, ದೇಶಗಳ ರಾಜಧಾನಿ ಇವನ ಬಾಯಲ್ಲಿ ಸುಲಲಿತವಾಗಿ ನಲಿದಾಡುತ್ತೆವೆ. ವಿಕಲಚೇತನ ಅಪ್ಪ ಹೇಳಿಕೊಟ್ಟ ಅರೆಬರೆ ಇಂಗ್ಲಿಷನ್ನೇ ತಲೆಯಲ್ಲಿ ಇಟ್ಟುಕೊಂಡು ಮಾತನಾಡುವ ಹಳ್ಳಿಹುಡುಗ ಗಣ್ಯರು, ರಾಜಕಾರಣಿಗಳ ಹೆಸರನ್ನು ಆಂಗ್ಲ ಭಾಷೆಯಲ್ಲಿ ಒಂದು ಪದವೂ ತಪ್ಪು ಇಲ್ಲದೆ (ಇಂಗ್ಲಿಷ್ ಲೆಟರ್) ಹೇಳುತ್ತಾನೆ. ದೇವೇಗೌಡ, ನರೇಂದ್ರ ಮೋದಿ, ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ , ನಿಖಿಲ್ ಕುಮಾರಸ್ವಾಮಿ, ಅಮಿತ್ ಷಾ, ರಾಹುಲ್ ಗಾಂಧಿ ಹೆಸರುಗಳನ್ನು ಇಂಗ್ಲಿಷ್‍ನಲ್ಲಿ ಹೇಳ್ತಾನೆ. ಈ ಹಳ್ಳಿ ಹೀರೋ ಚಂದನ್‍ಗೆ ಈ ಚಿಕ್ಕ ವಯಸ್ಸಿಗೆ ಇರುವ ಜ್ಞಾನಾರ್ಜನೆ ಕಂಡು ಗ್ರಾಮಸ್ಥರಲ್ಲಿ ಅಚ್ಚರಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ
Advertisement