ಕೋವಿಡ್-19 ಮಹಾಮಾರಿ ವೈರಸ್ ಬಂದಾಗಲಿಂದಲೂ ಮಾಸ್ಕ್ ಒಂದು ರೀತಿ ಜನ ಜೀವನದ ಒಂದು ಭಾಗವಾಗಿ ಹೋಗಿ ಬಿಟ್ಟಿದೆ ಎಂದೇ ಹೇಳಬಹುದು. ಕೊರೊನಾ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಫೇಸ್ ಮಾಸ್ಕ್ ಅತ್ಯಗತ್ಯ. ನಾವು ಎಲ್ಲಿಯೇ ಹೋದರೂ ಬಂದರೂ ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅಂತಹ ಮಾಸ್ಕ್‌ಗಳಲ್ಲಿಯೂ ಈಗ ಜನ ಟ್ರೆಂಡಿ ಹಾಗೂ ವೆರೈಟಿ ಅಂಶವನ್ನು ಹುಡುಕುತ್ತಾರೆ. ಅದರಲ್ಲಿಯೂ ಮದುವೆ ಸಮಯದಲ್ಲಿಯೂ ಕೂಡ ವರ ಹಾಗೂ ವಧು ತಮ್ಮ ಡ್ರೆಸ್‍ಗಳಿಗೆ ಸೂಟ್ ಆಗುವಂತಹ ಮಾಸ್ಕ್‌ಗಳನ್ನು ಧರಿಸಿಲು ಶುರು ಮಾಡಿದ್ದಾರೆ.
ಅದರಲ್ಲಿಯೂ ಮದುವೆಯ ವೇಳೆ ವಧು ಡ್ರೆಸ್‍ಗಳಿಗೆ ಸೂಟ್ ಆಗುವಂತಹ ಫೇಸ್ ಮಾಸ್ಕ್‌ಗಳನ್ನು ಧರಿಸಲೆಂದೇ ಹಲವು ರೀತಿಯ ಭಿನ್ನಭಿನ್ನವಾದ ಮಾಸ್ಕ್‌ಗಳು ಮಾರುಕಟ್ಟೆಗೆ ಬಂದಿದೆ. ಆದರೆ ಕೆಲವರಿಗೆ ತಮ್ಮ ಮದುವೆಯಲ್ಲಿ ಯಾವ ರೀತಿಯ ಮಾಸ್ಕ್ ಧರಿಸಬೇಕು ಎಂದೇ ತಿಳಿದಿರುವುದಿಲ್ಲ. ಅಂತಹವರಿಗೆ ಕೆಲವೊಂದು ಟ್ರೆಂಡಿ ಹಾಗೂ ಸ್ಟೈಲಿಶ್ ಫೇಸ್ ಮಾಸ್ಕ್‌ಗಳ ಕುರಿತ ಕೆಲವೊಂದು ಮಾಹಿತಿಗಳು ಈ ಕೆಳಗಿವೆ.
ಸಿಕ್ವನ್ ಟ್ವೀಡ್ ಫೇಸ್ ಮಾಸ್ಕ್
ಈ ಮಾಸ್ಕ್‌ನನ್ನು ಸಿಕ್ವಿನ್, ಪಾಲಿಯೆಸ್ಟರ್ ಮತ್ತು ರೇಯಾನ್ ಬಟ್ಟೆ ಮೂಲಕ ತಯಾರಿಸಲಾಗಿದ್ದು, ಜೊತೆಗೆ ಮಾಸ್ಕ್ ಮೇಲ್ಭಾಗ ಸಣ್ಣ ಜೇಬೊಂದನ್ನು ಇರಿಸಲಾಗಿದೆ. ಬಳಸಿ ಬೀಸಾಡಲು ಇದು ಒಂದು ರೀತಿಯ ಉತ್ತಮ ಫೇಸ್ ಮಾಸ್ಕ್ ಆಗಿದೆ.
ವಧು ಹಾಗೂ ವರ ಬರಹದ ಫೇಸ್ ಮಾಸ್ಕ್
ಈ ಫೇಸ್ ಮಾಸ್ಕ್‌ನನ್ನು ಕಾಟನ್‍ನಿಂದ ತಯಾರಿಸಲಾಗಿದ್ದು, ಮೂಗು ಹಾಗೂ ಬಾಯಿಯನ್ನು ಸಂರಕ್ಷಿಸುತ್ತದೆ. ಅಲ್ಲದೆ ಇದರ ಮೇಲೆ ವಧು ಹಾಗೂ ವರ ಎಂಬ ಅಕ್ಷರಗಳನ್ನು ಬರೆಯಲಾಗಿದ್ದು, ಬಹಳ ಫಿಟ್ ಆಗಿ ಮೂಗಿನ ಮೇಲೆ ಕುಳಿತುಕೊಂಡಿದುತ್ತದೆ.
ಸ್ಯಾಟಿನ್, ಫ್ಲೋರಲ್ ಲೇಸ್ ಫೇಸ್ ಮಾಸ್ಕ್
ಇದು ಪ್ಯೂರ್ ಸ್ಯಾಟಿನ್ ಬಟ್ಟೆಯಿಂದ ತಯಾರಿಸಿರುವ ಫೇಸ್ ಮಾಸ್ಕ್ ಆಗಿದ್ದು, ಇದರ ಮೇಲೆ ಸುಂದರವಾದ ಹೂವಿನ ಡಿಸೈನ್‍ಗಳನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ತಮಗೆ ಬೇಕಾದಂತಹ ರೀತಿಯಲ್ಲಿ ಫಿಟ್ ಮಾಡಿಕೊಳ್ಳಲು ಕಿವಿಯ ಬಳಿ ಫೋರಲ್ ಲೇಸ್ ನೀಡಲಾಗಿರುತ್ತದೆ.
ಸಿಲ್ಕ್ ಫೇಸ್ ಮಾಸ್ಕ್
ರೇಷ್ಮೆ, ರೆಯಾನ್, ಪಾಲಿಸ್ಟರ್ ಮಿಶ್ರತ ಮಾಸ್ಕ್ ಇದಾಗಿದ್ದು, ಇದರಲ್ಲಿ ಹೆಚ್ಚಾಗಿ ವೆಲ್ವೆಟ್‍ನನ್ನು ಬಳಸಲಾಗಿದೆ. ಈ ಮಾಸ್ಕ್ ಬಹಳ ಸಾಫ್ರ್ಟ್ ಆಗಿರುತ್ತದೆ. ತಂಪಾಗಿದ್ದ ಈ ಮಾಸ್ಕ್ ಧರಿಸಲು ಬೆಚ್ಚಾಗಿರುತ್ತದೆ.
ಲೇಸ್ ಹಾಗೂ ಸ್ಯಾಟಿನ್ ಹೊದಿಕೆಯ ಲೂಪ್ ಫೇಸ್ ಮಾಸ್ಕ್
ಇದು ಕಾಟನ್ ಹಾಗೂ ಸ್ಯಾಟಿನ್ ಬಟ್ಟೆಗಳ ಮಿಶ್ರಿತ ಫೇಸ್ ಮಾಸ್ಕ್ ಆಗಿದ್ದು, ಮೂಗೂ, ಬಾಯಿ ಮಾತ್ರವಲ್ಲದೆ ನಿಮ್ಮ ಗಲ್ಲವನ್ನು ಕೂಡ ಮುಚ್ಚಿರುತ್ತದೆ. ಜೊತೆಗೆ ಕಿವಿಯ ಹಿಂದೆ ಕಟ್ಟಿಕೊಳ್ಳಲು ಲೇಸ್ ನನ್ನು ಅಳವಡಿಸಲಾಗಿರುತ್ತದೆ.