ನವದೆಹಲಿ: ಕೊರೊನಾ ಆತಂಕ ಹಿನ್ನೆಲೆ ಭಾರತೀಯ ರೈಲ್ವೇ ಲೋಕಲ್ ಪ್ಯಾಸೆಂಜರ್ ಟಿಕೆಟ್ ದರವನ್ನ ಏರಿಕೆ ಮಾಡಿದೆ. ಕಡಿಮೆ ದೂರದ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ತಾಗಲಿದೆ. ಕೋವಿಡ್ ಹಿನ್ನೆಲೆ ಪ್ರಯಾಣಿಕರ ತಡೆಗಾಗಿ ಬೆಲೆ ಏರಿಕೆ ಅನಿವಾರ್ಯ ಆಗಿದೆ ಎಂದು ರೈಲ್ವೇ ಸಚಿವಾಲಯ ಸ್ಪಷ್ಟನೆ ನೀಡಿದೆ.
Advertisement
30 ರಿಂದ 40 ಕಿಲೋ ಮೀಟರ್ ಪ್ರಯಾಣದ ಟಿಕೆಟ್ ಬೆಲೆ ಏರಿಕೆಯಾಗಲಿದೆ. ಬೆಲೆ ಏರಿಕೆ ಪರಿಣಾಮ ಶೇ.3ರಷ್ಟು ರೈಲ್ವೇಗಳ ಮೇಲೆ ಬೀಳಲಿದೆ. ಕಳೆದ ಕೆಲ ದಿನಗಳಿಂದ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗ್ತಿದೆ. ರೈಲ್ವೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವ ಹಿನ್ನೆಲೆ ಸ್ಥಳೀಯವಾಗಿ ಸಂಚರಿಸುವ ಪ್ರಯಾಣಿಕರ ತಡೆಗಾಗಿ ಬೆಲೆ ಏರಿಕೆಗೆ ಮುಂದಾಗಿದೆ. ಹಾಗಾಗಿ ಕಡಿಮೆ ದೂರದ ಪ್ರಯಾಣಕ್ಕಾಗಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಚಿವಾಲಯ ಹೇಳಿದೆ.
Advertisement
Advertisement
ಸದ್ಯ ಬೆಲೆ ಏರಿಕೆಯಾಗ್ತಿರುವ ರೈಲ್ವೇಗಳು ಶೇ.3ರಷ್ಟು ಮಾತ್ರ ಸಂಚರಿಸುತ್ತಿವೆ. ಮೊದಲಿಗೆ ಲೋಕಲ್ ಪ್ಯಾಸೆಂಜರ್ ಪ್ರಯಾಣ ದರದ ಮೇಲೆ ಸಬ್ಸಿಡಿ ನೀಡಲಾಗುತ್ತಿತ್ತು. ಕೊರೊನಾ ನಿಯಂತ್ರಣಕ್ಕೆ ಬರೋವರೆಗೂ ಬೆಲೆ ಏರಿಕೆಯಾಗರಲಿದೆ. ಕೊರೊನಾ ಹಿನ್ನೆಲೆ ಲೋಕಲ್ ಪ್ಯಾಸೆಂಜರ್ ರೈಲುಗಳ ಸಂಚಾರವನ್ನ 2020, ಮಾರ್ಚ್ 22ರಿಂದ ಸ್ಥಗಿತಗೊಳಿಸಲಾಗಿದೆ.
Advertisement
ಸದ್ಯ ಪ್ರತಿದಿನ 1,250 ಮೇಲ್/ಎಕ್ಸಪ್ರೆಸ್, 5,350 ಉಪನಗರಗಳಿಗೆ ಸಂಪರ್ಕಿಸುವ ರೈಲುಗಳು ಹಾಗೂ 326ಕ್ಕೂ ಅಧಿಕ ವಿಶೇಷ ರೈಲುಗಳು ಸಂಚರಿಸುತ್ತಿದೆ. ಬೆಲೆ ಏರಿಕೆಯಿಂದಾಗಿ ರೈಲ್ವೇ ನಿಲ್ದಾಣಗಳಲ್ಲಿ ಉಂಟಾಗುವ ಜನಸಂದಣಿ ನಿಯಂತ್ರಣವಾಗಲಿದೆ ಎಂದು ಸಚಿವಾಲಯ ಹೇಳಿದೆ.