– ಕುಟುಂಬಸ್ಥರ ಮುಂದೆಯೇ ಮಹಿಳೆಯ ಮೇಲೆ ಹಲ್ಲೆ
– 2 ವಾರಗಳಿಂದ ಆಸ್ಪತ್ರೆಯಲ್ಲಿ ಸಾವು, ಬದುಕಿನ ಮಧ್ಯೆ ಹೋರಾಟ
ಬೀಜಿಂಗ್: ಚೀನಾದ ಸೋಶಿಯಲ್ ಮಿಡಿಯಾದ ಸ್ಟಾರ್ ಲೈವ್ ಶೋ ಮಾಡುವಾಗಲೇ ಆಕೆಯ ಮೇಲೆ ಮಾಜಿ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.
ಲಾಮು ಮೃತ ಮಹಿಳೆ. ಈ ಘಟನೆ ಸೆಪ್ಟೆಂಬರ್‌ನಲ್ಲಿ ನಡೆದಿದೆ. ಲಾಮು ವಿಡಿಯೋ ಬ್ಲಾಗರ್ ಆಗಿದ್ದು, ಲೈವ್ ಶೋ ಮಾಡುವಾಗ ಆಕೆ ಮಾಜಿ ಪತಿ ಟ್ಯಾಂಗ್ ಏಕಾಏಕಿ ಮನೆಗೆ ನುಗ್ಗಿದ್ದನು. ನಂತರ ಆಕೆಯ ಕುಟುಂಬ ಸದಸ್ಯರ ಮುಂದೆ ಹಲ್ಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು ಎಂದು ವರದಿಯಾಗಿದೆ.
Advertisement
Advertisement
ಹಲ್ಲೆಯಿಂದ ಲಾಮು ಶೇ.90 ರಷ್ಟು ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಎರಡು ವಾರಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಲಾಮು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೃತ ಲಾಮು ಮಾಜಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಯಾವ ಉದ್ದೇಶದಿಂದ ಈ ರೀತಿ ಮಾಡಿದ್ದಾನೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.
Advertisement
Advertisement
ಮೃತ ಲಾಮು ಕೌಟುಂಬಿಕ ಕಲಹದಿಂದ ಬೇಸತ್ತು ಪತಿಯಿಂದ ವಿಚ್ಛೇದನವನ್ನು ಪಡೆದುಕೊಂಡಿದ್ದಳು. ಹೀಗಾಗಿ ಪತ್ನಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಲಾಮು ಮಾಜಿ ಪತಿ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಲಾಮು ಜನಪ್ರಿಯ ಟಿಬೆಟಿಯನ್ ವಿಡಿಯೋ ಬ್ಲಾಗರ್ ಆಗಿದ್ದು, ಆಕೆ ಪಶ್ಚಿಮ ಚೀನಾದ ಸಿಚುವಾನ್ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಕುಟುಂಬದವರ ಜೊತೆ ವಾಸಿಸುತ್ತಿದ್ದಳು. ಟಿಕ್‍ಟಾಕ್ ಮಾದರಿಯ ಚೀನೀ ಆವೃತ್ತಿಯಾದ ಡೌಯಿನ್‍ನಲ್ಲಿ ಲಾಮು ಖಾತೆಯನ್ನು ಹೊಂದಿದ್ದಳು. ಅದರಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಲಾಮು 7,82,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಳು.
ಲಾಮು ಸೆಪ್ಟೆಂಬರ್ 14 ರಂದು ಕೊನೆಯ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಳು. ಆದರೆ ಮಾಜಿ ಪತಿಯಿಂದಲೇ ಹತ್ಯೆಯಾಗಿದ್ದಾಳೆ. ಈ ಬಗ್ಗೆ ತಿಳಿದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಲಾಮುವಿನ ಮಾಜಿ ಪತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಾಹಿಸಿದ್ದಾರೆ.