ರಾಯಚೂರು: ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲೆಯ ಲಿಂಗಸುಗೂರಿನಲ್ಲಿ ಇಂದು 7 ಸರ್ಕಾರಿ ಪ್ರೌಢಶಾಲೆಗಳ 257 ವಿದ್ಯಾರ್ಥಿಗಳಿಗೆ 129 ಟ್ಯಾಬ್‍ಗಳನ್ನ ವಿತರಿಸಲಾಗಿದೆ.
ಟ್ಯಾಬ್‍ಗಳನ್ನು ದಾನ ನೀಡಿದ ಹಟ್ಟಿ ಚಿನ್ನದ ಗಣಿ ನಿಗಮ ನಿಯಮಿತದ ಅಧ್ಯಕ್ಷ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು. ಲಿಂಗಸುಗೂರು ಪಟ್ಟಣದ ಸಾಂಸ್ಕøತಿಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಂಗಸಗೂರು ತಾಲೂಕಿನ ಚಿಕ್ಕಹೆಸರೂರು, ನಿಲೋಗಲ್ ಕ್ರಾಸ್, ಕಾಚಾಪುರ, ಮಾಕಾಪುರ, ಹುನೂರು,ಪೂಲಭಾವಿ ಹಾಗೂ ಲಿಂಗಸಗೂರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು.
ಆನ್ ಲೈನ್ ತರಗತಿಗಳು ಅರ್ಥವಾಗದೇ ಲಾಕ್ ಡೌನ್ ಸಮಯದಲ್ಲಿ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಾಗಿತ್ತು. ಉಚಿತ ಟ್ಯಾಬ್‍ಗಳನ್ನು ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕವಾಗಿ ನೀಡಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಉಚಿತ ಟ್ಯಾಬ್ ನೀಡಿದ್ದಕ್ಕೆ ಎಸ್‍ಎಸ್‍ಎಲ್ ಸಿ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಥೋಡ್, ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕುಳಗೇರಿ, ವೀರನಗೌಡ ಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.