ಯಾದಗಿರಿ: ಸಂತೆಗೆಂದು ಬೈಕ್ ಏರಿ ಬಂದಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಶಹಪುರ ನಗರದ ಬಸವೇಶ್ವರ ಸರ್ಕಲ್ ಬಳಿ ಘಟನೆ ನಡೆದಿದ್ದು, ಲಾರಿ ಡಿಕ್ಕಿಂಯಿಂದಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಪೇಟ್ ಅಮ್ಮಾಪುರ ಗ್ರಾಮದ ಶಿವಕುಮಾರ್ (26) ಎಂದು ಗುರುತಿಸಲಾಗಿದೆ.
ಸುರಪುರ ತಾಲೂಕಿನ ಪೇಟ್ ಅಮ್ಮಾಪುರದಿಂದ ಯುವಕ ಶುಕ್ರವಾರ ಸಂತೆಗೆ ಬಂದಿದ್ದ. ಈ ವೇಳೆ ಕಲಬುರಗಿಯಿಂದ ಶಹಾಪುರದ ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಎಮ್‍ಪಿ 06 ಹೆಚ್‍ಸಿ 1576 ನಂಬರಿನ ಲಾರಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಕಾಲ್ಕಿತ್ತಿದ್ದಾನೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.