ಲಾರಿ, ಕಾರ್ ನಡುವೆ ಅಪಘಾತ – ಮೂರು ಗಂಟೆ ಧಗ ಧಗಿಸಿದ ವಾಹನಗಳು

Public TV
0 Min Read
mdk accident 3

ಮಡಿಕೇರಿ: ಲಾರಿ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಎರಡೂ ವಾಹನಗಳು ಸುಮಾರು ಮೂರು ಗಂಟೆಗಳ ಕಾಲ ಹೊತ್ತಿ ಉರಿದಿವೆ. ತಡರಾತ್ರಿ ಮಡಿಕೇರಿ ಬಳಿಕ ಕೆದಕಲ್ ಬಳಿ ಅಪಘಾತ ಸಂಭವಿಸಿದೆ.

mdk accident 3

ಲಾರಿಯಲ್ಲಿ ಟೈಯರ್ ತುಂಬಿದ ಹಿನ್ನೆಲೆ ಕೆಲವೇ ಕ್ಷಣಗಳಲ್ಲಿ ಬೆಂಕಿ ತೀವ್ರತೆ ಪಡೆದುಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಮೂರು ವಾಹನಗಳೊಂದಿಗೆ ಅಗ್ನಿಶಾಮದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದರು. ಮೂರು ಗಂಟೆಗಳ ಕಾರ್ಯಚರಣೆ ಬಳಿಕ ಅಗ್ನಿಶಮನವಾಗಿದೆ.

mdk accident 1

ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಾಹನಗಳು ಮಾಲೀಕರು ಯಾರು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *