ಹಾಸನ: ಲಾರಿಯ ಇಂಜಿನ್‍ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಹಿನ್ನಲೆಯಲ್ಲಿ ಲಾರಿ ಚಾಲಕ ಸಜೀವ ದಹನವಾಗಿರುವ ಘಟನೆ ಹಾಸನದ ಬೈಪಾಸ್‍ನಲ್ಲಿ ನಡೆದಿದೆ.
ಹಾಸನದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಘಟನೆ ನಡೆದಿದ್ದು, ತಮಿಳುನಾಡು ಮೂಲದ ಲಾರಿ ಚಾಲಕ ಲಾರಿಯೊಳಗೆ ಸುಟ್ಟು ಹೋಗಿದ್ದಾನೆ.
ಆಕಸ್ಮಿಕ ಬೆಂಕಿಯಿಂದ ಲಾರಿ ಸುಟ್ಟು ಹೋಗಿದ್ದು, ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ವೇಳೆ ಚಾಲಕ ಲಾರಿಯಲ್ಲಿದ್ದ ವಿಚಾರ ಗೊತ್ತಾಗಿದೆ. ಬಳಿಕ ಲಾರಿಯ ಗಾಜು ಒಡೆದು ಹಾಕಿ ಚಾಲಕನನ್ನು ರಕ್ಷಣೆ ಮಾಡುವುದರೊಳಗೆ ಆತ ಸುಟ್ಟು ಕರಕಲಾಗಿದ್ದಾನೆ.
ಲಾರಿಯಲ್ಲಿನ ಎಂಜಿನ್ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಹಾಸನ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.