ಆನೇಕಲ್: ರಾಜ್ಯದಲ್ಲಿ ಸರ್ಕಾರ ಅನ್‍ಲಾಕ್ ಘೋಷಿಸುತ್ತಿದ್ದಂತೆಯೇ ಕೆಲವು ಖಾಸಗಿ ಶಾಲೆಗಳು ಶುರುವಾಗಿದ್ದು ಫೀಸ್ ಕಟ್ಟುವಂತೆ ಪೋಷಕರಿಗೆ ಕಿರುಕುಳ ನೀಡುತ್ತಿದ್ದಾರೆ.
ಕೊರೊನಾ ಎರಡನೇ ಅಲೆಯಿಂದಾಗಿ ಜನಸಾಮಾನ್ಯರಿಗೆ ಎಲ್ಲಿಲ್ಲದ ಸಮಸ್ಯೆ ಎದುರಾಗಿದೆ. ಹೀಗಿರುವಾಗ ವಿದ್ಯಾರ್ಥಿಗಳ ಭವಿಷ್ಯದ ಸಲುವಾಗಿ ಶಿಕ್ಷಣ ತಜ್ಞರು ಶಾಲೆಗಳನ್ನು ತೆರೆಯ ಬೇಕೆಂದು ಸಲಹೆ ನೀಡಿದೆ. ಆದರೆ ಈ ಕುರಿತಂತೆ ಸರ್ಕಾರ ಯಾವುದೇ ಅಧಿಕೃತ ಆದೇಶವನ್ನು ನೀಡಿಲ್ಲ. ಹೀಗಿರುವಾಗ ಆನೇಕಲ್ ತಾಲೂಕಿನ ಸುತ್ತಮುತ್ತಲಿನ ಅನೇಕ ಖಾಸಗಿ ಶಾಲೆಗಳು ಲಾಕ್ ಡೌನ್ ತೆಗೆದು ಕೇವಲ ಮೂರು ದಿನಗಳಲ್ಲಿ ಆರಂಭವಾಗಿದೆ. ಸರಕಾರದ ಆದೇಶಕ್ಕಾಗಿ ಕಾಯದೇ ಈಗಾಗಲೇ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ ಮಾಡಿ ಪೋಷಕರಿಗೆ ಶಾಲಾ ಶುಲ್ಕ ಕಟ್ಟುವಂತೆ ಟಾರ್ಚರ್ ನೀಡಲು ಮುಂದಾಗಿವೆ.
ಒಂದೆಡೆ ಆನ್‍ಲೈನ್ ಕ್ಲಾಸ್‍ಗಳನ್ನು ಶುರು ಮಾಡಿ ಫೀಸ್ ಕಟ್ಟದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ನೀಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಈ ಕೂಡಲೇ ಸಂಬಂಧಪಟ್ಟಂತಹ ಸಚಿವರು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಕ್ಯಾಂಡಿಡೇಟ್ ಎಂದು ಘೋಷಿಸಿದರೆ 150 ಸೀಟ್ ಫಿಕ್ಸ್: ಅಖಂಡ
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ಈಗಾಗಲೇ ಸರಕಾರ ಯಾವುದೇ ಮಾರ್ಗಸೂಚಿ ಪ್ರಕಟ ಮಾಡಿಲ್ಲ. ದಾಖಲಾತಿಯನ್ನು ಶಾಲೆಗಳು ಶುರು ಮಾಡಲಿ. ಆದರೆ ಫೀಸ್ ಕಟ್ಟುವಂತೆ ಸರಕಾರದ ಆದೇಶ ಬರುವವರೆಗೆ ಪೋಷಕರಿಗೆ ಒತ್ತಾಯಿಸಬಾರದು. ಜುಲೈ ಒಂದರಿಂದ ಶಾಲೆಗಳು ಶುರುವಾಗುವ ಸಾಧ್ಯತೆಗಳಿದ್ದು, ಈ ಕುರಿತಂತೆ ಶಾಲೆಗಳು ಫೀಸ್ ವಿಚಾರದಲ್ಲಿ ಕಾಲಾವಕಾಶ ನೀಡಬೇಕು. ಎಲ್‍ಕೆಜಿ, ಯುಕೆಜಿ ಮಕ್ಕಳನ್ನು ಕರೆಸಿ ಎಕ್ಸಾಮ್ ನಡೆಸಲು ಮುಂದಾಗಿದ್ದಾರೆ ಅಂತಹವರ ವಿರುದ್ದ ಕಾನೂನು ಕ್ರಮ ತೆಗೆದು ಕೊಳ್ಳುತ್ತೇವೆಂದು ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್ಗೆ ಇನ್ನೂ ವಯಸ್ಸಿದ್ದು, ಸಿದ್ದರಾಮಯ್ಯ ಸಿಎಂ ಆಗಲಿ: ರಾಮಪ್ಪ