ಮೈಸೂರು: ಲಾಕ್‍ಡೌನ್ ನಿಂದಾಗಿ ಕಾಡು ನೋಡುವುದನ್ನು ಮಿಸ್ ಮಾಡಿಕೊಂಡವರಿಗೆ ಕಾಡಿನ ಇವತ್ತಿನ ಚಿತ್ರಣವನ್ನು ತೋರಿಸುವ ವಿನೂತನ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡಿದೆ.
Advertisement
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಯೂಟ್ಯೂಬ್ ಮೂಲಕ ಜನರಿಗೆ ಕಾಡನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ವೀಡಿಯೋದಲ್ಲಿ ಹಸಿರಿನಿಂದ ಕೂಡಿರುವ ನಾಗರಹೊಳೆ ಕಾಡು, ವನ್ಯಪ್ರಾಣಿಗಳ ದರ್ಶನವಾಗುತ್ತಿದೆ. ನವಿಲುಗಳ ನರ್ತನ, ಜಿಂಕೆ ಹಾರಾಟ, ಕರಡಿ, ವಿವಿಧ ಪಕ್ಷಿಗಳು, ಆನೆಗಳು ಸೇರಿದಂತೆ ವಿವಿಧ ವನ್ಯಜೀವಿಗಳನ್ನು ಸೆರೆ ಹಿಡಿಯಲಾಗಿದೆ.
Advertisement
Advertisement
ಲಾಕ್‍ಡೌನ್ ನಲ್ಲಿ ಕಾಡು ಹೇಗಿದೆ ಎಂಬುದನ್ನು ಡ್ರೋನ್ ಮೂಲಕ ತೋರಿಸುವ ಪ್ರಯತ್ನ ಇದಾಗಿದೆ. ಸಫಾರಿ ಮಿಸ್ ಮಾಡಿಕೊಂಡವರಿಗೆ ಅದ್ಭುತವಾದ ವೀಡಿಯೋ ತಯಾರಿಸಿ ಬಿಡುಗಡೆ ಮಾಡಲಾಗಿದ್ದು, ಇಲಾಖೆಯ ಕೆಲಸಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.