ಚಿಕ್ಕೋಡಿ: ಲಾಕ್‍ಡೌನ್ ವೇಳೆ ಮಾರಲು ಗೋವಾದಿಂದ ಆಕ್ರಮವಾಗಿ ತರುತ್ತಿದ್ದ 6 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋವಾ ರಾಜ್ಯದಿಂದ ಕರ್ನಾಟಕದ ನಿಪ್ಪಾಣಿ ಕಡೆಗೆ ಆಕ್ರಮವಾಗಿ ಗೋವಾ ಮದ್ಯವನ್ನು ಐಶರ್ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಸುಮಾರು 6,22,300 ಬೆಲೆ ಬಾಳುವ ಮದ್ಯವನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಜಿಲ್ಲಾ ಸಿಇಎನ್ ಕ್ರೈಂ (ಡಿಸಿಬಿ) ಪೋಲಿಸರು ಯಮಕನಮರಡಿಯಲ್ಲಿ ವಶಪಡಿಸಿಕೊಂಡಿದ್ದಾರೆ.
ಲಾರಿ ಚಾಲಕ ಬೆಳಗಾವಿ ಜಿಲ್ಲೆಯ ಹೊನಗಾ ಗ್ರಾಮದ ಜನತಾ ಪ್ಲಾಟನ ನಿವಾಸಿ ಶಕೀಲ ಕಾಸೀಮಸಾಬ ಶೇಖ(34) ಬಂಧಿಸಲಾಗಿದೆ. ಬಂಧಿತ ಆರೋಪಿ ಲಾಕ್‍ಡೌನ್ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲು ಯತ್ನಿಸಿದ್ದ ಎನ್ನಲಾಗಿದೆ.
ಹುಕ್ಕೇರಿ ತಾಲೂಕಿನ ಎನ್‍ಎಚ್4 ರಸ್ತೆ ಮಣಗುತ್ತಿ ಕ್ರಾಸ್ ಬಳಿ ಒಟ್ಟು 6,22,300 ಬೆಲೆ ಬಾಳುವ 173 ರಟ್ಟಿನ ಬಾಕ್ಸ್‍ಗಳಲ್ಲಿದ್ದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.