ನವದೆಹಲಿ: ವ್ಯಾಕ್ಸಿನ್ ಪಡೆಯುವ ಕುರಿತು ಜಾಗೃತಿಯ ಕಾಲರ್ ಟ್ಯೂನ್ ಬಗ್ಗೆ ದೆಹಲಿ ಹೈ ಕೋರ್ಟ್ ಕಿಡಿ ಕಾರಿದ್ದು, ಸಾಕಷ್ಟು ವ್ಯಾಕ್ಸಿನ್ ಇಲ್ಲ, ಹೀಗಿರುವಾಗ ಜನ ಹೇಗೆ ಲಸಿಕೆ ಪಡೆಯಬೇಕು? ಕಿರಿಕಿರಿಯುಂಟು ಮಾಡುವ ಈ ಕಾಲರ್ ಟ್ಯೂನ್‍ನ್ನು ಇನ್ನೂ ಎಷ್ಟು ದಿನ ಕೇಳಬೇಕು ಎಂದು ದೆಹಲಿ ಹೈ ಕೋರ್ಟ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
Advertisement
ಪ್ರತಿ ಬಾರಿ ಕರೆ ಮಾಡಿದಾಗ ನೀವು ಕಿರಿಕಿರಿ ಉಂಟುಮಾಡುವ ಕಾಲರ್ ಟ್ಯೂನ್ ಪ್ಲೇ ಮಾಡುತ್ತಿದ್ದೀರಿ. ಇನ್ನೂ ಎಷ್ಟು ದಿನ ಇದನ್ನು ಕೇಳಬೇಕೋ ತಿಳಿಯುತ್ತಿಲ್ಲ. ನಿಮ್ಮ ಬಳಿ ಸಾಕಷ್ಟು ಲಸಿಕೆ ಲಭ್ಯತೆ ಇದೆಯೇ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈ ಕೋರ್ಟ್ ಪ್ರಶ್ನಿಸಿದೆ. ನೀವು ಜನರಿಗೆ ಲಸಿಕೆ ನೀಡುತ್ತಿಲ್ಲ. ಆದರೆ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂದೇಶ ನೀಡುತ್ತಿದ್ದೀರಿ. ಯಾರಿಗೂ ಲಸಿಕೆ ಇಲ್ಲದಿದ್ದಾಗ, ಯಾರು ಲಸಿಕೆ ಹಾಕಿಸಿಕೊಳ್ಳಬೇಕು? ಈ ಸಂದೇಶದ ಅರ್ಥವೇನು ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಅವರಿದ್ದ ಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
Advertisement
Advertisement
ಇಂತಹ ವಿಚಾರಗಳಲ್ಲಿ ಸರ್ಕಾರ ಆವಿಷ್ಕಾರಕವಾಗಿರಬೇಕು. ಕೇವಲ ಒಂದನ್ನು ತಯಾರಿಸಿ ಯಾವಾಗಲೂ ಅದನ್ನೇ ಹಾಕುವ ಬದಲು, ಇಂತಹ ಹೆಚ್ಚಿನ ಸಂದೇಶಗಳನ್ನು ಸಿದ್ಧಪಡಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಸ್ಥಿತಿಗೆ ಸ್ಪಂದಿಸಬೇಕು. ಹೀಗಾಗಿ ವಿವಿಧ ರೀತಿಯ ಹೆಚ್ಚು ಸಂದೇಶಗಳನ್ನು ತಯಾರಿಸಿ, ಪ್ರತಿ ಬಾರಿ ಬೇರೆ ಬೇರೆ ಕಾಲರ್ ಟ್ಯೂನ್ ಕೇಳಿದಾಗ ಅವರಿಗೆ ಸಹಾಯವಾಗಬಹುದು ಎಂದು ನ್ಯಾಯಾಲಯ ಸೂಚಿಸಿದೆ.
Advertisement
ಟಿವಿ ನಿರೂಪಕರು ಹಾಗೂ ನಿರ್ಮಾಪಕರ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿ, ಈ ಮೂಲಕ ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ಅರಿವು ಮೂಡಿಸಿ. ನಾವು ಸಮಯವನ್ನು ಕಳೆಯುತ್ತಿದ್ದೇವೆ. ಕೊರೊನಾ ನಿರ್ವಹಣೆ ಮಾಹಿತಿಯನ್ನು ಟಿವಿ, ಮುದ್ರಣ ಮಾಧ್ಯಮ ಹಾಗೂ ಕಾಲರ್ ಟ್ಯೂನ್‍ಗಳ ಮೂಲಕ ಪ್ರಸಾರ ಮಾಡಲು ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ಮೇ.18ರೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ.