ದಾವಣಗೆರೆ: ಅಲ್ಪಸಂಖ್ಯಾತ ಸಮುದಾಯಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಬೆನ್ನಲ್ಲೇ ಮನವೋಲಿಸಲು ದಾವಣಗೆರೆಯಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಲು ಸಭೆ ಕರೆದಿದ್ದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಸಭೆ ಕರೆದು ಮಾತನಾಡಿದ ಅವರು, ಅಲ್ಪಸಂಖ್ಯಾತ ಮೌಲ್ವಿಗಳ ಸಭೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಸಮುದಾಯದ ಜನರಿಗೆ ಮನವೊಲಿಸುವಂತೆ ಮನವಿ ಮಾಡಿದರು. ಮಸೀದಿಗಳ ಮೌಲ್ವಿ ಸೇರಿದಂತೆ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿ ಯಾರು ವ್ಯಾಕ್ಸೀನ್ ಹಾಕಿಸಿಕೊಂಡಿಲ್ವೋ ಅಂತಹವರನ್ನು ಮನವೋಲಿಸಿ ಲಸಿಕೆ ಹಾಕಿಸುವಂತೆ ಶಾಸಕ ರೇಣುಕಾಚಾರ್ಯ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಸೋಂಕಿಗೆ ಬಲಿ
ಕೊರೊನಾ ಲಸಿಕೆ ಹಾಕಿಸಿಕೊಂಡ್ರೇ ಯಾವುದೇ ಸಮಸ್ಯೆ ಆಗುವುದಿಲ್ಲ, ಯಾರು ಭಯ ಪಡುವ ಅವಶ್ಯಕತೆ ಇಲ್ಲ, ನಿರ್ಭಯದಿಂದ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ವಿರುದ್ಧ ಹೋರಾಟ ಮಾಡಬೇಕು ಎಂದು ಮನವರಿಕೆ ಮಾಡಿದರು. ಇದೇ ವೇಳೆ ಮಸೀದಿಯ ಮೌಲ್ವಿಗಳು, ಸಿಪಿಐ ದೇವರಾಜ್ ಕೂಡ ಸಭೆಯಲ್ಲಿ ಭಾಗಿಯಾಗಿ ಅಲ್ಪಸಂಖ್ಯಾತರು ತಮ್ಮ ತಮ್ಮ ಕುಟುಂಬಗಳಿಗೆ ಲಸಿಕೆ ಹಾಕಿಸಿವಂತೆ ಪ್ರೇರೆಪಿಸಿದರು.
ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿದ ಅವರು ಅಲ್ಪಸಂಖ್ಯಾತರು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಕೂಡ ಮೂಡಿಸಿದ್ದಾರೆ. ಕೊರೊನಾ ಸಮಯದಲ್ಲಿ ಶಾಸಕರ ಎಂಪಿ ರೇಣುಕಾಚಾರ್ಯ ಕೆಲಸ ಕಾರ್ಯವನ್ನು ಮುಸ್ಲಿಂ ಮುಖಂಡರು ಹಾಡಿ ಹೊಗಳಿದ್ದಾರೆ.