– ಈಗ ಜೆಡಿಎಸ್, ಬಿಜೆಪಿ ಹೊಸ ಬೀಗತನ ನಡೆದಿದೆ
ಹುಬ್ಬಳ್ಳಿ: ಲವ್ ಮ್ಯಾರೇಜ್ ಆದರೆ ಹೀಗೇ ಆಗೋದು, ಯಾವಾಗಲೂ ಕಿರಿಕಿರಿ, ಪರಸ್ಪರ ಆರೋಪ, ಪ್ರತ್ಯಾರೋಪಗಳು ಹೆಚ್ಚುತ್ತವೆ ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರು ಸೇರಿ ಮದುವೆ ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ. ಪ್ರೀತಿಯಿಂದ ಹೊರಿಯ ಜೊತೆ ಸೇರಿ ವಿವಾಹವಾಗಿತ್ತು, ಚೆನ್ನಾಗಿತ್ತು. ಆದರೆ ಇದೀಗ ಹೊಸ ಬೀಗತನದ ಬಗ್ಗೆ ಚಿಂತನೆ ನಡೆದಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜತೆ ಮೈತ್ರಿ ಬಗ್ಗೆ ವೈಯಕ್ತಿಕ ವಿರೋಧವಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು. ದೇವೇಗೌಡರು, ಕುಮಾರಣ್ಣ ನಿರ್ಧಾರ ತೆಗೆದುಕೊಳ್ಳುತ್ತಾರೆ. 2005-06ರಲ್ಲಿ ಮೈತ್ರಿ ಸುಗಮವಾಗಿಯೇ ಇತ್ತು. ಆದರೂ ಲವ್ ಮ್ಯಾರೇಜ್ ಯಾವಾಗಲೂ ಹೀಗೆ ಕಿರಿಕಿರಿ ಹೆಚ್ಚು ಎಂದು ಕೊನರೆಡ್ಡಿ ಹೇಳಿದರು.
ಒಂದು ವರ್ಷದ ಬಳಿಕ ಸಿದ್ದರಾಮಯ್ಯನವರಿಗೆ ಜ್ಞಾನೋದಯ ಆಗಿದೆ. ಬಹಳ ದೊಡ್ಡ ನಾಯಕರಬಗ್ಗೆ ನಾನೇನೂ ಹೇಳುವುದಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಣ್ಣನವರ ಸಮಸ್ಯೆ ಬಗೆಹರಿಯುವ ಲಕ್ಷಣ ಇಲ್ಲ ಎಂದರು.