-ಪಕ್ಕದ್ಮನೆ ಅಪ್ರಾಪ್ತನ ಜೊತೆ ಲವ್
-ಮನೆಯಲ್ಲಿ ಡೆತ್ ನೋಟ್ ಪತ್ತೆ
ನವದೆಹಲಿ: ಪ್ರೀತಿಸುತ್ತಿದ್ದ ಹುಡುಗ ಮೋಸ ಮಾಡಿದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನವದೆಹಲಿಯ ಫರೀದಾಬಾದ್ ನಲ್ಲಿ ನಡೆದಿದೆ.
ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನ ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದೆ. ಪತ್ರದಲ್ಲಿ ಬಾಲಕಿ ತಾನು ಪಕ್ಕದ್ಮನೆಯ ಹುಡುಗನನ್ನ ಪ್ರೀತಿ ಮಾಡುತ್ತಿದ್ದೆ. ಆದ್ರೆ ಅವನು ಬೇರೆ ಹುಡುಗಿ ಜೊತೆ ಪ್ರೀತಿಸುತ್ತಿದ್ದಾನೆ ಎಂದು ಬರೆದಿದ್ದಾಳೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಮಗಳ ಬರೆದ ಪತ್ರದಿಂದ ಆಕೆ ಪ್ರೀತಿಸುತ್ತಿರುವ ವಿಷಯ ನಮಗೆ ತಿಳಿದಿದೆ. ಆಕೆ ಪತ್ರದಲ್ಲಿ ತನ್ನ ಸಾವಿಗೆ ಈಶ್ವರ್ ಎಂಬಾತ ಕಾರಣ ಎಂದು ಬರೆದಿದ್ದಳೆ ಎಂದು ಮೃತ ಬಾಲಕಿಯ ತಂದೆ ಹೇಳಿದ್ದಾರೆ. ಮನೆಯಲ್ಲಿ ದೊರೆತ ಸೂಸೈಡ್ ನೋಟ್ ನಿಂದ ಪ್ರೇಮ ವೈಫಲ್ಯ ಹಿನ್ನೆಲೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರೋದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್.ಪಿ. ಆದರ್ಶದೀಪ್ ಹೇಳಿದ್ದಾರೆ.