– ‘ನಾನು ಹೆದರಿಕೊಳ್ಳುವ ಮಗಳಲ್ಲ’- ಹೆಬ್ಬಾಳ್ಕರ್ ತಿರುಗೇಟು
ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಚಿವ ರಮೇಶ್ ಜಾರಕಿಹೊಳಿ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹಂಚಿದ್ದ ಕುಕ್ಕರ್ ಕೊಟ್ಟಿದ್ದು ನಾನೇ, ಕುಕ್ಕರ್ ಹಂಚಿದ್ದು ನನ್ನ ದುಡ್ಡಲ್ಲಿ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
Advertisement
ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರ ಬೆಳಗಾವಿ ಗ್ರಾಮೀಣದಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಉದ್ಘಾಟಿಸಿದ ಸಚಿವರು, ತಮ್ಮ ಭಾಷಣದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಿಗೆ ಹಣದ ಗ..ಡ್ ಬಹಳ ಇದೆ. ನಾವು ಹಣದ ಗ..ಡ್‍ನ್ನು ನಾವು ತೋರಿಸಲು ಸಿದ್ಧರಿದ್ದೇವೆ. ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಸ್ಟಾರ್ಟ್ ಇದೆಯೋ ಬಂದ್ ಇದೆಯೋ? ಎಂದು ವ್ಯಂಗ್ಯವಾಡಿದರು.
Advertisement
ದುಡ್ಡಿನ ಆಮಿಷಕ್ಕೆ ಬಲಿಯಾಗಬೇಡಿ ನಾನು ನಿಮ್ಮ ಜೊತೆಗಿರುತ್ತೇನೆ. 2023ರ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು. ಮುಂಬರುವ ಡಿಸಿಸಿ ಬ್ಯಾಂಕ್, ಜಿ.ಪಂ., ಗ್ರಾ.ಪಂ. ಎಲೆಕ್ಷನ್‍ಗೆ ಗಟ್ಟಿಯಾಗಿ ನಿಲ್ಲಬೇಕು. ಈಗಾಗಲೇ ಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರ ದುಡ್ಡು ಹಂಚುತ್ತಿದ್ದಾರೆಂಬ ಮಾಹಿತಿ ಇದೆ. ಅವರು ಎಷ್ಟು ಕೊಡ್ತಾರೋ ಅದಕ್ಕೆ ಡಬಲ್ ದುಡ್ಡು ಕೊಡಲು ಸಿದ್ಧರಿದ್ದೇವೆ. ಸಾಲ ಮಾಡಿ ಆದರೂ ದುಡ್ಡು ಕೊಡ್ತೀವಿ. ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು ಬಲಪಡಿಸುತ್ತೇವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಸಭೆ ಮಾಡೋಣ ಬಹಳ ಮಾತನಾಡೋದಿದೆ ಎಂದರು.
Advertisement
Advertisement
ಇತ್ತ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸರ್ಕಾರದ ಸಚಿವ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತನಾಡುವುದು ಸರಿಯಲ್ಲ. ಕುಕ್ಕರ್ ವಿಚಾರ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಮಾತನಾಡಿದರೇ ನ್ಯಾಯಾಂಗ ನಿಂದನೆ ಆಗುತ್ತೆ. ಆದರೆ ಕ್ಷೇತ್ರದಲ್ಲಿ ಹರ್ಷ ಶುಗರ್ ಕಾರ್ಖಾನೆ ಇದೆ ಎಂಬ ಕಾರಣಕ್ಕೆ ಕಾರ್ಯಕ್ರಮ ಮಾಡಿ ಕುಕ್ಕರ್ ನೀಡಿದ್ದೆವು. ಸಚಿವರ ಬಳಿ ಈ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಕ್ಯಾಬಿನೆಟ್ ಸಚಿವರು ಸೋಕ್ಕಿನಿಂದ ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಕಾನೂನಿನ ಹೋರಾಟ ನಡೆಸಲು ವಕೀಲರ ಬಳಿ ಮಾತುಕತೆ ನಡೆಸುತ್ತಿದ್ದೇನೆ ಎಂದರು.
ಚುನಾವಣೆ ಸಂಬಂಧ ಹಣ ಹಂಚಿಕೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ಶುಗರ್ ಫ್ಯಾಕ್ಟರಿಗೆ ಕಬ್ಬು ನೀಡಿದ್ದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು. ಅವರಿಗೆ ಸಚಿವರು ಮೊದಲು ಹಣ ಬಿಡುಗಡೆ ಮಾಡಲಿ. ನಾನು ನಿಮ್ಮ ಭಾಷಣಕ್ಕೆ ಹೆದರಿಕೊಳ್ಳುವ ಮಗಳಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಉತ್ತಮ ಕೆಲಸ ಮಾಡಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವರಿಗೆ ಸಲಹೆ ನೀಡಿದರು.