-ಏನಿದು ರೋ ರೋ ರೈಲು?
ಬೆಂಗಳೂರು: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಲಾರಿಗಳ ಮುಖಾಂತರ ಸರಕು ಸೇವೆಗಳನ್ನು ಸಾಗಿಸುವ ರೋ ರೋ ರೈಲ್ವೆ ಯೋಜನೆಗೆ ಚಾಲನೆ ದೊರೆಯಿತು. ಬೆಂಗಳೂರು ಹೊರವಲಯದ ನೆಲಮಂಗಲ ರೈಲ್ವೆ ನಿಲ್ದಾಣದಲ್ಲಿ ಇಂದು ನೈಋತ್ಯ ರೈಲ್ವೆ ಯೋಜನೆ ಲೋರ್ಕಾಪಣೆಗೊಂಡಿತ್ತು.
ಇಂದಿನಿಂದ ರಾಜ್ಯದಿಂದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬೇಲ್ ರೈಲ್ವೆ ನಿಲ್ದಾಣಕ್ಕೆ ಮಧ್ಯೆ ಮೊದಲ ರೋಲ್ ಆನ್ ರೋಲ್(ರೋ-ರೋ) ಸೇವೆ ಆರಂಭವಾಯಿತು. ಇಂದು ಮದುಮಗಳಂತೆ ರೈಲು ಸಿಂಗಾರಗೊಂಡಿತ್ತು. ಹಸಿರು ನಿಶಾನೆ ತೋರುವ ಮೂಲಕ ರೈಲಿಗೆ ಸಿಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣದಿಂದ ಚಾಲನೆ ನೀಡಿದರು. ಸುಮಾರು 17 ರಿಂದ 20 ಗಂಟೆಯೊಳಗೆ ರೈಲು ತನ್ನ ನಿಗದಿತ ನಿಲ್ದಾಣ ತಲುಪಲ್ಲಿದ್ದು, ಸುಮಾರು ಅಂದಾಜು 27,000 ಒಂದು ಲಾರಿಗೆ ವೆಚ್ಚ ತಗುಲಿದೆ. ಸುಮಾರು 52 ಲಾರಿವರೆಗೆ ಈ ರೈಲಿನಲ್ಲಿ ಸಾಗಿಸಬಹುದಾಗಿದೆ.
Advertisement
ಬೆಂಗಳೂರಿನ ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೋಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸುವ ರೋಲ್ಆನ್-ರೋಲ್ಆಫ್ ರೈಲು ಸೇವೆಗೆ ಮುಖ್ಯಮಂತ್ರಿ ಶ್ರೀ @BSYBJP ರವರು ಹಸಿರು ನಿಶಾನೆ ತೋರುವ ಮೂಲಕ ಇಂದು ಚಾಲನೆ ನೀಡಿದರು. (1/2)@PMOIndia @PiyushGoyal pic.twitter.com/Epwm7a5uqW
— CM of Karnataka (@CMofKarnataka) August 30, 2020
Advertisement
ಏನಿದು ರೋ ರೋ ರೈಲು?: ಲಾರಿಗಳಲ್ಲಿ ಲೋಡ್ ಮಾಡಿ ರೈಲುಗಳಲ್ಲಿ ಹೊತ್ತೊಯ್ದು ನಿಗದಿತ ನಿಲ್ದಾಣಗಳಲ್ಲಿ ಲಾರಿಗಳನ್ನು ರೈಲಿನಿಂದ ಕೆಳಗಿಳಿಸಿ ನೇರವಾಗಿ ಸರಕುಗಳನ್ನು ಮಾಲಿಕರ ಸ್ಥಳಗಳಿಗೆ ತಲುಪಿಸುವುದೆ ಈ ರೋ-ರೋ ಸೇವೆ ಮಹತ್ವ. ಇದರಲ್ಲಿ ಇಂಧನ ಕಡಿಮೆ ಬಳಕೆಯಾಗುತ್ತದೆ ಪ್ರಯಾಣದ ಅವಧಿ ಕಡಿತಗೊಳ್ಳುತ್ತದೆ. ಸಮಯ, ರಸ್ತೆ ಅಪಘಾತ, ಚಾಲಕರಿಗೆ ಅನುಕೂಲ, ಇಂಧನದ ಸಮಸ್ಯೆ ಹಾಗೂ ಮುಖ್ಯವಾಗಿ ಕಳ್ಳತನವಾಗುವುದು ತಪ್ಪುತ್ತದೆ. ವಿಶೇಷವೇನೆಂದರೆ ರೋ-ರೋ ಸೇವೆ ದೇಶದ ಹಲವು ಕಡೆಗಳಲ್ಲಿ ಲಭ್ಯವಿದೆ. ಆದರೆ ಮೊದಲ ಬಾರಿಗೆ ನೈಋತ್ಯ ರೈಲ್ವೆ (ಎಸ್‍ಡಬ್ಲ್ಯುಆರ್) ನಲ್ಲಿ ಇಂದಿನಿಂದ ಆರಂಭವಾಗಲಿದೆ.
Advertisement
ಈ ಸಂದರ್ಭದಲ್ಲಿ ಮಾನ್ಯ ಕೇಂದ್ರ ರೈಲ್ವೆ ರಾಜ್ಯಸಚಿವ @SureshAngadi_ , ಕಂದಾಯ ಸಚಿವ @RAshokaBJP, ಜಲಸಂಪನ್ಮೂಲ ಸಚಿವ @RameshJarkiholi, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರ್ ಗೌಡ ಪಾಟೀಲ್ ಶಾಸಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು. (2/2) pic.twitter.com/GZ55bUOSMv
— CM of Karnataka (@CMofKarnataka) August 30, 2020
Advertisement
ನೈಋತ್ಯ ರೈಲ್ವೆ(SWಖ) ಮೊದಲ ಬಾರಿಗೆ ಸೇವೆ ಸಲ್ಲಿಸಲಿದ್ದು, ಕೃಷಿ ಉಪಕರಣಗಳು, ರಾಸಾಯನಿಕ ಮತ್ತು ಕೈಗಾರಿಕಾ ವಸ್ತುಗಳನ್ನು ಒಳಗೊಂಡ ಒಟ್ಟು 1260 ಟನ್ ಗಳನ್ನು ಮೊದಲ ಓಟದಲ್ಲಿ ಲೋಡ್ ಗಳನ್ನು ಕೊಂಡೊಯ್ಯಲಿದೆ. ಇದು ನೆಲಮಂಗಲ ಮತ್ತು ಬೇಲ್ ನಡುವೆ 682 ಕಿ.ಮೀ ದೂರದಲ್ಲಿ ಚಲಿಸುತ್ತದೆ ಮತ್ತು ಮೂರು ರೈಲ್ವೆ ವಲಯಗಳನ್ನು ಒಳಗೊಂಡಿದೆ.