ಮೈಸೂರು: ಡಿಸಿ ರೋಹಿಣಿ ಸಿಂಧೂರಿ ಕೆಲಸಗಾತಿ ಅಲ್ಲ, ಪ್ರಚಾರ ಪ್ರಿಯೆ ಅಂತ ಹೇಳುವುದಕ್ಕೆ ಮೈಸೂರಿಗೆ ಬಂದೆ ಎಂದು ಮಾಜಿ ಸಚಿವ ಎ. ಮಂಜು ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ರೋಹಿಣಿ ಸಿಂಧೂರಿ ಬಗ್ಗೆ ಮಾತನಾಡಿ, ನಾನು ಯಾರ ಪರವೂ, ವಿರುದ್ಧವೂ ಮಾತನಾಡಿಲ್ಲ. ಡಿಸಿ ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ, ಹಿರಿಯ ರಾಜಕಾರಣಿಗಳಿಗೆ ಗೌರವ ಕೊಡಲ್ಲ ಅಂತಾ ಹೇಳೋಕೆ ಬಂದಿದ್ದೆ. ಒಬ್ಬ ಶಾಸಕರನ್ನ ಏಕವಚನದಲ್ಲಿ ಮಾತನಾಡೋದು ವೆರಿ ಬ್ಯಾಡ್. ಈ ರೀತಿಯ ವರ್ತನೆಯನ್ನು ರೋಹಿಣಿ ಸಿಂಧೂರಿ ಸರಿಪಡಿಸಿಕೊಳ್ಳಬೇಕು ಎಂದರು.
Advertisement
Advertisement
ಇದೇ ವೇಳೆ ಈ ಹಿಂದೆ ತನ್ನ ಕಾಲೆಳೆದಿದ್ದ ಹೆಚ್. ವಿಶ್ವನಾಥ್ ಗೆ ಟಾಂಗ್ ನೀಡಿದ ಮಾಚಿ ಸಚಿವರು, ಹಾಸನದಿಂದ ಇಲ್ಲಿ ಬಂದು ಡಿಸಿ ವಿರುದ್ಧ ಮಾತನಾಡುತ್ತಾರೆ ಎಂದು ವಿಶ್ವನಾಥ್ ಹೇಳಿದ್ದರು. ಇದಕ್ಕೆ ಟಾಂಗ್ ಕೊಟ್ಟರು. ಕೆರೆ, ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡ್ಬೇಕು ಅಂತ ರೋಹಿಣಿ ಸಿಂಧೂರಿ ಹೇಳಿದ್ರು. ಇದನ್ನೂ ಓದಿ: ರಾಜಕಾಲುವೆ ಮೇಲೆ ಕಲ್ಯಾಣ ಮಂಟಪವಿದ್ದರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್
Advertisement
ಹಾಸನದಲ್ಲಿ ಕೆರೆ ಉಳುವಿಗಾಗಿ ಜನರು ಸ್ವಂತ ಹಣದಲ್ಲಿ ಕೆರೆ ಮಾಡಲು ಮುಂದಾಗಿದ್ರು. ಈ ವೇಳೆ ರೋಹಿಣಿ ಸಿಂಧೂರಿಯೇ ಅಲ್ಲಿನ ಡಿಸಿಯಾಗಿದ್ರು. ಆಗ ಆಹ್ವಾನ ನೀಡಿದ್ದ ವೇಳೆ ಕೆರೆ ಬಳಿ ಬಂದು ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ ಎಂದು ಹೇಳುತ್ತಾ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.
Advertisement
ಮೈಸೂರಿನಲ್ಲಿ ಭೂ ಮಾಫಿಯಾ ಮಾಡಿದ್ದಾರೆ ಅಂತಾರೆ. ಆದ್ರೆ ಈವರೆಗೂ ಭೂ ಮಾಫಿಯಾ ಮಾಡಿದವರ ವಿರುದ್ಧ ಒಂದೇ ಒಂದು ಎಫ್‍ಐಆರ್ ಆಗಿಲ್ಲ ಏಕೆ?. ಎಲ್ಲರೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಆದರೆ ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿ ದಂಧೆ ಮಾಡಬಾರದು. ಎಷ್ಟು ಅಧಿಕಾರಿಗಳು ಮೈಸೂರಿಗೆ ಬಂದು ಹೋಗಿದ್ದಾರೆ. ಈವರೆಗೂ ಭೂ ಮಾಫಿಯಾ ಮಾಡುವವರ ಮೇಲೆ ಎಫ್ ಐ ಆರ್ ಆಗಿಲ್ಲ ಯಾಕೆ?. ಭೂ ಮಾಫಿಯಾ ಮಾಡಿದ್ದಾರೆ ಅಂತ ಡಿಸಿಯಾಗಿದ್ದ ರೋಹಿಣಿ ಹೇಳಿದ್ದಾರೆ. ಆದರೆ ಅವರ ಮೇಲೆ ಎಫ್‍ಐಆರ್ ಯಾಕೆ ಮಾಡಿಸಿಲ್ಲ. ಕೇವಲ ಪ್ರಚಾರಕ್ಕೆ ಮಾಡೋದಲ್ಲ. ಸಾರ್ವಜನಿಕ ಆಸ್ತಿ, ಸರ್ಕಾರದ ಆಸ್ತಿಯ ಬಗ್ಗೆ ಆನ್ ರೆಕಾರ್ಡ್ ಇರುತ್ತದೆ ಅದನ್ನು ರಕ್ಷಿಸಬೇಕು ಎಂದರು. ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನು ಮೈಸೂರಿನ ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ವಿಶ್ವನಾಥ್ ಆಗ್ರಹ