ಬೆಂಗಳೂರು: ರಾಜ್ಯದ ರೈಲು ನಿಲ್ದಾಣಗಳಲ್ಲಿ ನಡೆಯುವ ಅಪರಾಧ ಗಳನ್ನು ತಗ್ಗಿಸಲು ಹಾಗೂ ಪ್ರಯಾಣಿಕರ ಜೊತೆ ನಿರಂತರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ರೈಲ್ವೇ ಪೊಲೀಸ್ ಇಲಾಖೆಯು ತಮ್ಮ ಸಿಬ್ಬಂದಿಗೆ ವಿಸಿಟಿಂಗ್ ಕಾರ್ಡ್ ಮಾಡಿಸಿದೆ. ವಿಸಿಟಿಂಗ್ ಕಾರ್ಡ್‍ಗಳನ್ನು ಪ್ರಯಾಣಿಕರಿಗೆ ವಿತರಿಸುವ ಮೂಲಕ ಕಳ್ಳತನ ಸೇರಿದಂತೆ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದೆ.
ರೈಲ್ವೇ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ಎಸ್.ಪಿ ಸಿರಿಗೌರಿ ಅವರು ಪ್ರಾಯೋಗಿಕ ಹಂತವಾಗಿ ಬೆಂಗಳೂರು, ಯಶವಂತಪುರ ಹಾಗೂ ಕಂಟ್ಮೊನೆಂಟ್ ರೈಲ್ವೇ ಕೆಲ ಪೊಲೀಸರಿಗೆ ತಮ್ಮ ಹೆಸರು, ಪೋನ್ ನಂಬರ್ ಸಮೇತ ವಿಸಿಟಿಂಗ್ ಕಾರ್ಡ್ ಮಾಡಿಸಲು ಅನುಮತಿ ನೀಡಿದ್ದಾರೆ. ಈಗಾಗಲೇ ಕಾನ್ ಸ್ಟೇಬಲ್‍ಗಳು ‘ಸದಾ ನಿಮ್ಮ ಸೇವೆಯಲ್ಲಿ’ ಇಂಗ್ಲೀಷ್ ನಲ್ಲಿ ‘ಹ್ಯಾಪಿ ಟೂ ಹೆಲ್ಪ್’ ಶೀರ್ಷಿಕೆ ಜೊತೆಗೆ ವಿಸಿಟಿಂಗ್ ಕಾರ್ಡ್ ಗಳನ್ನು ಪ್ರಯಾಣಿಕರಿಗೆ ವಿತರಣೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: CITYನನ್ನ ಪರವಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು – ಬಿಎಸ್‍ವೈ ಮನವಿ
ರೈಲ್ವೇ ಹಳಿ ಹಾಗೂ ನಿಲ್ದಾಣಗಳಲ್ಲಿ ಕಳ್ಳತನ, ವಂಚನೆ, ಕೊಲೆ ಹಾಗೂ ದರೋಡೆ ಸೇರಿದಂತೆ ಇನ್ನಿತರ ಕ್ರೈಂ ಚಟುವಟಿಕೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಯಶವಂತಪುರ, ಕಂಟೊನ್ಮೆಂಟ್, ಬಂಗಾರಪೇಟೆ, ಮಂಡ್ಯ, ಮೈಸೂರು, ಹಾಸನ ಹಾಗೂ ಅರಸಿಕೇರೆ ರೈಲ್ವೇ ಪೊಲೀಸರ ಹೆಸರಿನಲ್ಲಿ ವಿಸಿಟಿಂಗ್ ಕಾರ್ಡ್ ಮಾಡಿಸಲಾಗಿದೆ. ರಾಜ್ಯದಲ್ಲಿ ಬರುವ 18 ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಗೂ ಅನುಮತಿ ನೀಡಲಾಗಿದ್ದು, ವಾಟ್ಸಾಪ್ ಮೂಲಕ ಹೆಚ್ಚೆಚ್ಚು ಪ್ರಯಾಣಿಕರಿಗೆ ಕಳುಹಿಸಲು ಸಿದ್ಧತೆ ನಡೆದಿದೆ.
ಅಪರಾಧ ಮಾಹಿತಿ ಜೊತೆಗೆ ಪ್ರಯಾಣದ ಸಂದರ್ಭಗಳಲ್ಲಿ ಏನಾದರೂ ತೊಂದರೆ ಉಂಟಾದರೆ ವಿಸಿಟಿಂಗ್ ಕಾರ್ಡ್ ನಂಬರ್‍ಗೆ ಕರೆ ಮಾಡಿದರೆ ಕೂಡಲೇ ಸ್ಪಂದಿಸಲಿದ್ದಾರೆ. ಏನಾದರೂ ವಸ್ತುಗಳು ಕಳವು ಆದರೆ ಆಥವಾ ಗೊಂದಲವಿದ್ದರೂ ಪ್ರಯಾಣಿಕರು ಕರೆ ಮಾಡಬಹುದಾಗಿದೆ. ಈ ಮೂಲಕ ಪ್ರಯಾಣಿರಲ್ಲಿ ಮಾನಸಿಕ ಧೈರ್ಯ ತುಂಬುವ ಜೊತೆಗೆ ಹೆಚ್ಚಿನ ಬಾಂಧವ್ಯ ಮೂಡಿಸಲು ಸಹಕಾರಿಯಾಗಲಿದೆ. ಪೊಲೀಸರ ವಿನೂತನ ಯೋಜನೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.