ನವದೆಹಲಿ: ಭಾರತೀಯ ರೈಲ್ವೇಯಲ್ಲಿ ಅದಾನಿ ಹೆಸರು ಹಾಕಲಾಗಿದೆ ಎಂದು ಆರೋಪಿಸಿ ಮೋದಿ ಸರ್ಕಾರವನ್ನು ಪ್ರಿಯಾಂಕಾ ಗಾಂಧಿ ಟೀಕಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪಿಐಬಿ ಫ್ಯಾಕ್ಟ್ ಚೆಕ್ ಈಗ ಸ್ಪಷ್ಟನೆ ನೀಡಿದೆ.
ಪ್ರಿಯಾಂಕಾ ಗಾಂಧಿ ಅವರ ಅಧಿಕೃತ ಫೇಸ್‌ಬುಕ್ ಖಾತೆಯಿಂದ ವಿಡಿಯೋ ಅಪ್ಲೋಡ್ ಆಗಿತ್ತು. ಈ ವಿಡಿಯೋಕ್ಕೆ ದೇಶದ ಲಕ್ಷಾಂತರ ಜನರ ಕಠಿಣ ಪರಿಶ್ರಮದಿಂದ ನಿರ್ಮಾಣಗೊಂಡ ಭಾರತೀಯ ರೈಲ್ವೆಯಲ್ಲಿ ಬಿಜೆಪಿ ಸರ್ಕಾರ ತನ್ನ ಬಿಲಿಯನೇರ್ ಸ್ನೇಹಿತ ಅದಾನಿಯ ಅಂಚೆಚೀಟಿ ಹಾಕಿದೆ. ನಾಳೆ ರೈಲ್ವೆಯ ಹೆಚ್ಚಿನ ಭಾಗವು ಮೋದಿ ಜಿ ಅವರ ಬಿಲಿಯನೇರ್ ಸ್ನೇಹಿತರಿಗೆ ಹೋಗುತ್ತದೆ ಎಂದು ಆರೋಪಿಸಿ ಬರೆಯಲಾಗಿತ್ತು.
Advertisement
Advertisement
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಡಿಸೆಂಬರ್ 14ರಂದು ಅಪ್ಲೋಡ್ ಮಾಡಿದ ವಿಡಿಯೋ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. 10 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದ್ದು, 6 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.
Advertisement
दावा: #फेसबुक पर एक वीडियो के साथ यह दावा किया जा रहा है कि सरकार ने भारतीय रेल पर एक निजी कंपनी का ठप्पा लगवा दिया है। #PIBFactCheck: यह दावा भ्रामक है। यह केवल एक वाणिज्यिक विज्ञापन है जिसका उद्देश्य केवल 'गैर किराया राजस्व' को बेहतर बनाना है। pic.twitter.com/vSmK8Xgdis
— PIB Fact Check (@PIBFactCheck) December 16, 2020
Advertisement
ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದ್ದೇನು?
ಫೇಸ್‌ಬುಕ್‌ನಲ್ಲಿರುವ ವೀಡಿಯೊದಲ್ಲಿ ಭಾರತ ಸರ್ಕಾರವು ಖಾಸಗಿ ಕಂಪನಿಯ ಅಂಚೆಚೀಟಿಗಳನ್ನು ರೈಲುಗಳಲ್ಲಿ ಹಾಕಿದೆ ಎಂದು ಹೇಳಲಾಗುತ್ತಿದೆ. ಇದು ತಪ್ಪು ಮಾಹಿತಿಯಾಗಿದೆ. ಬಾಡಿಗೆ ಅಲ್ಲದ ಆದಾಯವನ್ನು ಹೆಚ್ಚಿಸುವ ದೃಷ್ಟಿಯಿಂದ ಭಾರತೀಯ ರೈಲ್ವೇಯಲ್ಲಿ ಹಾಕಲಾಗಿರುವ ಕೇವಲ ವಾಣಿಜ್ಯ ಜಾಹೀರಾತು ಎಂದು ಸ್ಪಷ್ಟನೆ ನೀಡಿದೆ.
https://twitter.com/Indiansagar2/status/1339127486852972544
ಭಾರತೀಯ ರೈಲ್ವೇ ವಿವಿಧ ಮೂಲಗಳಿಂದ ಆದಾಯ ಹೆಚ್ಚಿಸಲು ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ಬೋಗಿಯ ಹೊರಗಡೆ ಕಂಪನಿಗಳ ಜಾಹೀರಾತು ಹಾಕಲು ಅನುಮತಿ ನೀಡಿದೆ. ಇದನ್ನೂ ಓದಿ: ಮೊದಲ ಬಾರಿ ಟ್ರೈನ್ ಏರಿ ಬಂದು ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ಶ್ರೀಮನ್ನಾರಾಯಣ