– 1.7 ಲಕ್ಷ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ಕಿಂಗ್ ಪುನಾರಂಭ
ನವದೆಹಲಿ: ಶೀಘ್ರದಲ್ಲಿ ಮತ್ತಷ್ಟು ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಇನ್ನೇರಡು ಅಥವಾ ಮೂರು ದಿನಗಳಲ್ಲಿ ದೇಶದ 1.7 ಲಕ್ಷ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ಕಿಂಗ್ ಪುನಾರಂಭಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಪಿಯೂಷ್ ಗೋಯಲ್ ಅವರು, ಶ್ರಮಿಕ್-ರಾಜಧಾನಿ ಹೊರತಾಗಿ 200 ಎಸಿ ರಹಿತ ರೈಲುಗಳು ಜೂನ್ ಒಂದರಿಂದ ಸಂಚಾರ ಆರಂಭಿಸಲಿದೆ. ದೇಶವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಮತ್ತಷ್ಟು ರೈಲುಗಳ ಸಂಚಾರ ಆರಂಭಿಸುವುದಾಗಿ ಹೇಳಿದರು.
Advertisement
Advertisement
ಜೂನ್ ಒಂದರಿಂದ 200 ನಾನ್ ಎಸಿ ರೈಲು ಸಂಚಾರ ಮಾಡಲಿದ್ದು, ಮೊದಲ ಹಂತದಲ್ಲಿ 73 ರೈಲುಗಳು ಸಂಚಾರ ಆರಂಭಿಸಲಿದೆ. ಬುಕ್ಕಿಂಗ್ ಆರಂಭವಾದ ಎರಡು ಗಂಟೆಯಲ್ಲಿ 1,49,025 ಟಿಕೆಟ್‍ಗಳು ಬುಕ್ ಆಗಿದೆ. ಬುಕ್ಕಿಂಗ್ ಹೆಚ್ಚಿಸಲು ರೈಲು ನಿಲ್ದಾಣ ಕೌಂಟರ್‌ಗಳಲ್ಲಿ ಬುಕ್ಕಿಂಗ್ ಆರಂಭಿಸಲಿದ್ದು, ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪಿಯೂಷ್ ಗೋಯಲ್ ತಿಳಿಸಿದರು.
Advertisement
ಮೇ 20 ವರೆಗೂ 279 ಶ್ರಮಿಕ್ ರೈಲುಗಳು ದೇಶಾದ್ಯಂತ ಸಂಚರಿಸಿದ್ದು, ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿದಂತೆ ಹಲವು ಜನರನ್ನು ಊರು ತಲುಪಿಸುವ ಕಾರ್ಯ ರೈಲ್ವೆ ಇಲಾಖೆ ಮಾಡಿದೆ ಎಂದರು.