– ನನಗೆ ಅವನ ಮೇಲೆ ಹೆಮ್ಮೆಯಾಗುತ್ತಿದೆ
ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ನಟಿ ರಕ್ಷಿತಾ ಸಿನಿಮಾ ರಂಗದಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸದ್ಯ ರಕ್ಷಿತಾರವರು ತಮ್ಮ ಮಗನ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹೌದು ಹಿರಿತೆರೆಯಿಂದ ದೂರ ಸರಿದಿದ್ದರು, ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಸದ್ದು ಮಾಡುತ್ತಿರುವ ನಟಿ ರಕ್ಷಿತಾ, ತಮ್ಮ ಪ್ರೀತಿಯ ಪುತ್ರ ಸೂರ್ಯ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಸೂರ್ಯ ತೋಟದಲ್ಲಿ ರೈತರಂತೆ ಕೃಷಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿಯೇ ಕಾಲಕಳೆಯುತ್ತಿರುವ ಅನೇಕ ಮಕ್ಕಳು ತಮ್ಮ ತಂದೆ ಹಾಗೂ ತಾಯಿಗೆ ಸಹಾಯ ಮಾಡುತ್ತಿದ್ದಾರೆ. ಸದ್ಯ ಅದರಂತೆ ರಕ್ಷಿತಾರವರ ಪುತ್ರ ಕೂಡ ಬೆಳೆ ಕಟಾವು ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ಸದ್ಯ ಈ ವೀಡಿಯೋ ಜೊತೆಗೆ ರಕ್ಷಿತಾರವರು ನನಗೆ ಅವನ ಮೇಲೆ ಬಹಳ ಹೆಮ್ಮೆಯಾಗುತ್ತಿದೆ. ನನ್ನ ಪುಟ್ಟ ರೈತ. ಅವನು ತೊಟದಲ್ಲಿ ಕೆಲಸ ಮಾಡುವುದನ್ನು ಕಲಿಯುತ್ತಿರುವುದು ನನಗೆ ಬಹಳ ಸಂತೋಷವಾಗಿದೆ. ಇದು ಭಾನುವಾರ ಸೂರ್ಯ ನಮ್ಮ ತೋಟದಲ್ಲಿ ಕೆಲಸ ಮಾಡಿದ್ದಾನೆ. ಇದು ನನಗೆ ಬಹಳ ಖುಷಿಯಾಗಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
ನಿರ್ದೇಶಕ ಪ್ರೇಮ್ ಮೂಲತಃ ರೈತಾಪಿ ಕುಟುಂಬದಿಂದ ಬಂದಿದ್ದು, ಮಂಡ್ಯ ಜಿಲ್ಲೆಯವರಾಗಿದ್ದಾರೆ. ಸದ್ಯ ಪ್ರೇಮ್ ಸಿನಿಮಾ ನಿರ್ದೇಶನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ರಕ್ಷಿತಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಖಂಡಿತ ನಿಮ್ಮನ್ನು ಒಮ್ಮೆ ಭೇಟಿ ಆಗ್ತೀನಿ: ಅಭಿಮಾನಿಗೆ ರಶ್ಮಿಕಾ ಸಂದೇಶ
View this post on Instagram