ದಾವಣಗೆರೆ: ರೇಣುಕಾಚಾರ್ಯ ಅವರಂತಹ ಗಂಡ ಸಿಕ್ಕಿರುವುದು ನನ್ನ ಏಳೇಳು ಜನ್ಮದ ಪುಣ್ಯ. ಯಾವಾಗಲೂ ಜನರ ಯೋಗಕ್ಷೇಮಕ್ಕಾಗಿ ಓಡಾಡುತ್ತಿರುತ್ತಾರೆ. ನಾನು ಆರು ಜನ್ಮದಲ್ಲಿ ಪುಣ್ಯ ಮಾಡಿದ್ದಕ್ಕೆ ಈ ಜನ್ಮದಲ್ಲಿ ಇಂತಹ ಒಳ್ಳೆಯ ಗಂಡನನ್ನು ಪಡೆದಿದ್ದೇನೆ ಎಂದು ಪತಿಯನ್ನು ಸುಮಿತ್ರಾ ಹಾಡಿ ಹೊಗಳಿದ್ದಾರೆ.
ದಾವಣಗೆರೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೊನಾ ಸೋಂಕು ನಿವಾರಣೆಗಾಗಿ ಧನ್ವಂತರಿ ಹಾಗೂ ಮೃತ್ಯುಂಜಯ ಹೋಮ ಆಯೋಜಿಸಲಾಗಿದೆ. ಈ ಪೂಜೆಯಲ್ಲಿ ಶಾಸಕರಾದ ರೇಣುಕಾಚಾರ್ಯ ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು. ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುಮಿತ್ರಾ ರೇಣುಕಾಚಾರ್ಯ, ಅವರ ಆರೋಗ್ಯ ಏನಾದ್ರು ಆಗಲಿ. ಜನರು ಚೆನ್ನಾಗಿರಲಿ ಅಂತ ಹೇಳ್ತಾರೆ. ಸೋಂಕಿತರಿಗೆ ಧೈರ್ಯ ಹೇಳಿ, ಇಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಅದ್ದರಿಂದ ನಾನು ಕೂಡ ಅವರ ಜೊತೆಯಲ್ಲಿದ್ದೇನೆ ಎಂದರು.
ಬೆಳಗ್ಗೆಯಿಂದ ರಾತ್ರಿ ಮಲಗುವರೆಗೂ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದು ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಮಹಿಳೆಯರುದ್ದು, ತಮ್ಮ ಸಮಸ್ಯೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಸೋಂಕಿತರನ್ನು ದೂರ ಮಾಡುವ ಬದಲು ಹತ್ತಿರ ಹೋಗಿ ಹೇಗಿದ್ದೀರಾ ಎಂದು ಮಾತನಾಡಿಸಿದರೆ ಏನೋ ಒಂದು ಧೈರ್ಯ ಅವರಲ್ಲಿ ಬರುತ್ತದೆ. ನಾನು ಏಕಾಂಗಿ ಅಲ್ಲ ಅನ್ನುವ ಮನೋಭಾವ ಅವರಲ್ಲಿ ಬೆಳೆಯುತ್ತದೆ. ಅಂತಹ ಕೆಲಸವನ್ನು ನಮ್ಮ ಯಜಮಾನರ ಜೊತೆ ಸೇರಿ ನಾನು ಮಾಡುತ್ತಿದ್ದೇನೆ. ಅಂತವರನ್ನು ಪಡೆದ ನಾನೇ ನಿಜಕ್ಕೂ ಅದೃಷ್ಟವಂತೆ ಎಂದು ಹೇಳಿದರು. ಇದನ್ನೂ ಓದಿ: ಕೊರೊನಾಗೆ ಗರ್ಭಿಣಿ ಕಾನ್‍ಸ್ಟೇಬಲ್ ನಿಧನ – ರೇಣುಕಾಚಾರ್ಯ ಸಂತಾಪ