ಕರಾವಳಿ ಭಾಗದಲ್ಲಿ ಓಡು ದೋಸೆ(ಓಡ್ಪಾಲೆ) ತುಂಬಾನೇ ಫೇಮಸ್. ಇದನ್ನು ಯಾವುದೇ ರೀತಿಯ ಎಣ್ಣೆಯನ್ನು ಬಳಸದೆ ಬರೀ ಮಣ್ಣಿನ ಕಾವಲಿಯ ಮೇಲೆ ಮಾಡಲಾಗುತ್ತದೆ. ನಿಮ್ಮಲ್ಲಿ ಮಣ್ಣಿನ ಕಾವಲಿ ಇಲ್ಲವೆಂದಲ್ಲಿ ಕಬ್ಬಿಣದ ಹಂಚಿನಲ್ಲೂ ಮಾಡಬಹುದು.
Advertisement
ಬೇಕಾಗುವ ಸಾಮಗ್ರಿಗಳು:
ದೋಸೆ ಅಕ್ಕಿ- 3 ಕಪ್
ಉಪ್ಪು- ರುಚಿಗೆ ತಕ್ಕಷ್ಟು
ತೆಂಗಿನ ತುರಿ- ಒಂದೂವರೆ ಕಪ್ ಇದನ್ನೂ ಓದಿ: ಬಿಸಿಬಿಸಿಯಾಗಿ ಮಾಡಿ ಸವಿಯಿರಿ ಪುಂಡಿ
Advertisement
Advertisement
ಮಾಡುವ ವಿಧಾನ:
* ಹಿಂದಿನ ದಿನ ರಾತ್ರಿಯೇ ಅಕ್ಕಿಯನ್ನು ನೀರಿನಲ್ಲಿ ನೆನೆ ಹಾಕಿ.
* ಹೀಗೆ ನೆನೆಸಿಟ್ಟ ಅಕ್ಕಿಯನ್ನು ತೊಳೆದು ಅದರ ಜೊತೆ ಕಾಯಿತುರಿ ಹಾಕಿ ನೀರು ಹಾಕಿ ನುಣ್ಣಗೆ ರುಬ್ಬಿ.
* ಬಳಿಕ ದೋಸೆಹಿಟ್ಟನ್ನು ನೀರು ಹಾಕಿ ಸ್ವಲ್ಪ ತೆಳ್ಳಗೆ(ನೀರು ದೋಸೆ ಹಿಟ್ಟಷ್ಟು ಅಲ್ಲ) ಮಾಡಿ ನಂತರ ರುಚಿಗೆ ತಕ್ಕೊಕಷ್ಳ್ಳಿಟು ಉಪ್ಪು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಇತ್ತ ಮಣ್ಣಿನ ಕಾವಲಿ (ಮಧ್ಯದಲ್ಲಿ ಸ್ವಲ್ಪ ಆಳವಿರೋ) ಅಥವಾ ಕಬ್ಬಿಣದ ಕಾವಲಿಯನ್ನು ಒಲೆಯ ಮೇಲೆ ಬಿಸಿಯಾಗಲು ಇಡಿ.
* ಕಾವಲಿ ಬಿಸಿಯಾದ ಬಳಿಕ ಒಂದು ಸೌಟಿನಲ್ಲಿ ರುಬ್ಬಿಟ್ಟ ಹಿಟ್ಟನ್ನು ತೆಗೆದುಕೊಂಡು ಅದನ್ನು ಕಾವಲಿಯ ಮಧ್ಯಭಾಗದಲ್ಲಿ ಹಾಕಬೇಕು. ಕಾವಲಿಯ ಮಧ್ಯದಲ್ಲಿ ಸ್ವಲ್ಪ ಆಳ ಇರುವುದರಿಂದ ದೋಸೆ ಮಧ್ಯದಲ್ಲಿಯೇ ದಪ್ಪನೆ ಇದ್ದು ಅಂಚಿನಲ್ಲಿ ತೆಳ್ಳಗೆ ಇರುತ್ತದೆ. ಇದನ್ನೂ ಓದಿ: ಮಧ್ಯಾಹ್ನ ಊಟಕ್ಕೆ ಮಾಡಿ ಬಿಸಿ, ಬಿಸಿ ಫಿಶ್ ಕಬಾಬ್
Advertisement
* ಈ ದೋಸೆಯನ್ನು ತಿರುವಿ ಹಾಕಬೇಡಿ. ಒಂದು ಕಡೆ ಮಾತ್ರ ಚೆನ್ನಾಗಿ ಬೇಯಿಸಿ ತೆಗೆಯಿರಿ.
* ಇದಾದ ಬಳಿಕ ಇನ್ನೊಂದು ದೋಸೆ ಹಾಕುವ ಮುನ್ನ ಒಂದು ಒದ್ದೆ ಬಟ್ಟೆಯಿಂದ ಕಾವಲಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
* ಈ ಬಿಸಿ ಬಿಸಿ ದೋಸೆಯನ್ನು ನಿಮಗೆ ಇಷ್ಟವಾಗಿರುವ ಚಟ್ನಿ ಜೊತೆ ಸವಿಯಿರಿ.