ವೀಕೆಂಡ್‍ನಲ್ಲಿ 2 ದಿನಗಳಕಾಲ ಮನೆಯಲ್ಲಿಯೇ ಇರಬೇಕು. ಹೊರಗೆ ಯಾವುದೇ ಹೋಟೆಲ್, ಅಂಗಡಿ ಮುಗ್ಗಟ್ಟುಗಳು ತೆರೆದಿರುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ನೀವು ತುಂಬಾ ಸರಳವಾಗಿ ರುಚಿಯಾಗಿ ಬಾಳೆಎಲೆ ಫಿಶ್ ಫ್ರೈ ಮಾಡಿ ಸವಿಯ ಬಹುದಾಗಿದೆ. ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಬಾಳೆ ಎಲೆ
* ಮೀನು ಅರ್ಧ ಕೆಜಿ
* ಕೊಬ್ಬರಿ ಎಣ್ಣೆ- 2 ಕಪ್
* ಬ್ಯಾಡಗಿ ಮೆಣಸು – 5ರಿಂದ7
* ಗುಂಟೂರು ಮೆಣಸು -6 ರಿಂದ7
* ಕೊತ್ತಂಬರಿ ಬೀಜ -2 ರಿಂದ 3 ಚಮಚ
* ಜೀರಿಗೆ- ಅರ್ಧ ಚಮಚ
* ಮೆಂತೆ- ಅರ್ಧ ಚಮಚ
* ಹುಣಸೆಹಣ್ಣು ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಟು
* ಅರಿಶಿಣ ಚಿಟಿಕೆ
Advertisement
Advertisement
ಮಾಡುವ ವಿಧಾನ:
Advertisement
* ಕೊತ್ತಂಬರಿ ಬೀಜ, ಜೀರಿಗೆ, ಗುಂಟೂರು ಮೆಣಸು ,ಬ್ಯಾಡಗಿ ಮೆಣಸು, ಹುಣಸೆಹಣ್ಣು, ಮೆಂತೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು.
* ಹುರಿದಿಟ್ಟ ಈ ಸಾಮಾಗ್ರಿಗಳು ತಣ್ಣಗಾದ ಬಳಿಕ ಮಿಕ್ಸಿಜಾರಿಗೆ ಎಲ್ಲವನ್ನು ಹಾಕಿ ಸಣ್ಣದಾಗಿ ಪೌಡರ್ ಮಾಡಿಕೊಳ್ಳಬೇಕು. ನಂತರ ಸ್ಪಲ್ಪ ಸ್ವಲ್ಪ ನೀರು ಸೇರಿಸುತ್ತಾ ಚೆನ್ನಾಗಿ ರುಬ್ಬಿ ಮಸಾಲೆಯನ್ನು ತಯಾರಿಸಿಕೊಳ್ಳಬೇಕು.
* ಚೆನ್ನಾಗಿ ತೊಳೆದು ಮೀನಿನ ಮಧ್ಯಭಾದದಲ್ಲಿ ಸಿಳಿರಬೇಕು ಯಾಕೆಂದ್ರೆ ಮಸಾಲೆ ಚೆನ್ನಾಗಿ ಮೀನಿನ ಒಳಗೆ ಹೋಗುತ್ತದೆ.
* ಬಾಳೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ಈಗ ಮೀನಿಗೆ ಚೆನ್ನಾಗಿ ಮಸಾಲೆಯನ್ನು ಹಚ್ಚಿ ಬಾಳೆ ಎಲೆಯ ಜೊತೆಯಲ್ಲಿ ಸುತ್ತಿಕೊಳ್ಳಬೇಕು.
* ಒಂದು ತವಾಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಬಾಳೆ ಎಲೆಯಲ್ಲಿ ಸುತ್ತಿಟ್ಟ ಮಸಾಲೆ ಮೀನಿಗಳನ್ನು ಹಾಕಿ ಚೆನ್ನಾಗಿ ಬೇಯಿಸಬೇಕು. ಇದೀಗ ರುಚಿಯಾದ ಮತ್ತು ಸರಳವಾದ ಬಾಳೆಎಲೆ ಫಿಶ್ ಫ್ರೈ ಸವಿಯಲು ಸಿದ್ಧವಾಗುತ್ತದೆ.