ವೀಕೆಂಡ್‍ಗೆ ರುಚಿಯಾದ ಅಡುಗೆಯನ್ನು ತಿನ್ನಬೇಕು ಎಂದೂ ಎಲ್ಲರು ಬಯಸುತ್ತೇವೆ. ಪ್ರತಿನಿತ್ಯ ಹೋಟೆಲ್‍ಗಳಲ್ಲಿ ಸಿಗುವ ಆಹಾರ ಸೇವಿಸಿ ಸಾಕಾಗಿದೆ. ಮನೆಯಲ್ಲಿಯೇ ಸರಳವಾಗಿ ಫಟಾಫಟ್ ಆಗಿ ರುಚಿಯಾಗಿ ಏನಾದರೂ ಮಾಡಬೇಕು ಎಂದು ಕೊಂಡಿರುವವರು ಚಿಕನ್ ತವಾ ಫ್ರೈ ಮಾಡಿ ನೋಡಿ….
Advertisement
ಬೇಕಾಗುವ ಸಾಮಗ್ರಿಗಳು:
* ಚಿಕನ್- 1 ಕೆಜಿ
* ಅರಿಶಿನ ಪುಡಿ- ಚಿಟಿಕೆ
* ಅಚ್ಚಖಾರದ ಪುಡಿ- 1 ಟೀ ಸ್ಪೂನ್
* ದನಿಯಾ ಪೌಡರ್- 1 ಟೀ ಸ್ಪೂನ್
* ಜೀರಿಗೆ ಪೌಡರ್ _ 1 ಟೀ ಸ್ಪೂನ್
* ಗರಂಮಸಾಲಾ ಪೌಡರ್- ಅರ್ಧ ಟೀ ಸ್ಪೂನ್
* ನಿಂಬೆಹಣ್ಣು- ಅರ್ಧ
* ಮೊಸರು – ಅರ್ಧ ಕಪ್
* ಕಸೂರಿಮೇತಿ _ 1 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ – 1 ಕಪ್
Advertisement
Advertisement
ಮಾಡುವ ವಿಧಾನ:
* ಒಂದ ಬೌಲ್‍ಗೆ ಚಿಕನ್ ಹಾಕಿ ಚೆನ್ನಾಗಿ ತೊಳೆಯಬೇಕು.
* ಚಿಕನ್ ಇರುವ ಬೌಲ್‍ಗೆ ಅರಿಶಿನ ಪುಡಿ, ಅಚ್ಚಖಾರದಪುಡಿ, ದನಿಯಾ ಪೌಡರ್, ಜೀರಿಗೆ ಪೌಡರ್, ಗರಂಮಸಾಲಾ ಪೌಡರ್, ನಿಂಬೆಹಣ್ಣು, ಮೊಸರು, ಕಸೂರಿಮೇತಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಸಾಲೆಯು ಚೆನ್ನಾಗಿ ಚಿಕನ್‍ನೊಂದಿಗೆ ಮಿಶ್ರಣವಾಗುವ ಹಾಗೆ ಮಿಕ್ಸ್ ಮಾಡಬೇಕು.
Advertisement
* ಈ ಮಸಾಲೆ ಚಿಕನ್‍ನೊಂದಿಗೆ ಮೀಶ್ರಣವಾಗಬೇಕು ಹಾಗಾಗಿ 10 ನಿಮಿಷಗಳಕಾಲ ಹಾಗೆ ಇಟ್ಟಿರಬೇಕು.
* ನಂತರ ಒಂದು ತವಾಗೆ 4 ರಿಂದ 5 ಸ್ಪೂನ್ ಅಡುಗೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಬಿಸಿಯಾಗುವವರೆಗೂ ಕಾಯಬೇಕು.
* ನಂತರ ಒಂದೊಂದೆ ಚಿಕನ್ ಪೀಸ್‍ಗಳನ್ನು ತವಾಗೆ ಹಾಕಬೇಕು.
* ಸಣ್ಣ ಉರಿ ಬೆಂಕಿಯಲ್ಲಿ ಕೆಂಪಗಾಗುವವರೆಗೆ ಬೇಯಿಸಿದರೆ ಚಿಕನ್ ತವಾ ಫ್ರೈ ಸವಿಯಲು ಸಿದ್ಧವಾಗುತ್ತದೆ.