ನಾಳೆ ಭಾನುವಾರ ಹೀಗಾಗಿ ಎಲ್ಲರೂ ಮನೆಯಲ್ಲಿರುತ್ತೀರ. ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಪ್ರತಿ ಬಾರಿಯೂ ಚಿಕನ್ ಬಿರಿಯಾನಿ, ಕಬಾಬ್, ಮಟನ್ ತಿಂದು ಬೇಸರವಾಗಿರುತ್ತದೆ. ಹೊಸದಾಗಿ ಏನಾದರೂ ಮಾಡೋಣ ಎಂದು ಪ್ಲಾನ್ ಮಾಡುತ್ತಿರುತ್ತೀರಿ. ಮೊಟ್ಟೆ ಅಂದರೆ ಎಲ್ಲರಿಗೂ ಇಷ್ಟ. ಮೊಟ್ಟೆಯಲ್ಲಿ ಅನೇಕ ಅಡುಗೆಯನ್ನು ತಯಾರಿಸಬಹುದು. ಆದ್ದರಿಂದ ನಿಮಗಾಗಿ ಸ್ಪೈಸಿ ಆದ ಎಗ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು
1. ಮೊಟ್ಟೆ – 5
2. ಅಕ್ಕಿ – ಒಂದು ಗ್ಲಾಸ್
3. ಈರುಳ್ಳಿ – 2
4. ಟೊಮೆಟೊ – 3
5. ಹಸಿರು ಮೆಣಸಿನಕಾಯಿ – 3
6. ಖಾರದ ಪುಡಿ- 1.5 ಚಮಚ
7. ಗರಂ ಮಸಾಲ – 1.5 ಚಮಚ
8. ದನಿಯಾ ಪುಡಿ – 1.5 ಚಮಚ
9. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಚಮಚ
Advertisement
10. ಎಣ್ಣೆ – 3 ಚಮಚ
11. ಉಪ್ಪು – ರುಚಿಗೆ ತಕ್ಕಷ್ಟು
12. ಪುದಿನ, ಕೊತ್ತಂಬರಿ ಸೊಪ್ಪು
13. ಲವಂಗ, ಚಕ್ಕೆ, ಸ್ಟಾರ್ ಹೂ – 2
14. ಏಲಕ್ಕಿ, ಪಲವ್ ಎಲೆ – 2
15. ಅರಿಶಿಣ – 1 ಚಮಚ
Advertisement
Advertisement
ಮಾಡುವ ವಿಧಾನ
* ಮೊದಲಿಗೆ 5 ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಳ್ಳಬೇಕು.
* ಸ್ಟೌವ್ ಮೇಲೆ ಒಂದು ಕುಕ್ಕರ್ ಇಟ್ಟು ಒಂದು ಚಮಚ ಎಣ್ಣೆ ಹಾಕಿ. ಅದಕ್ಕೆ ಅರ್ಧ ಚಮಚ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಲಾ, ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ.
* ಅದಕ್ಕೆ ಬೇಯಿಸಿ ಇಟ್ಟುಕೊಂಡಿದ್ದ ಮೊಟ್ಟೆ ಹಾಕಿ ಚೆನ್ನಾಗಿ ಫ್ರೈ ಮಾಡಿ ಒಂದು ಬೌಲ್‍ಗೆ ಎತ್ತಿಟ್ಟುಕೊಳ್ಳಿ.
* ಈಗ ಅದೇ ಕುಕ್ಕರ್‌ಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಲವಂಗ, ಚಕ್ಕೆ, ಸ್ಟಾರ್ ಹೂ, ಏಲಕ್ಕಿ ಮತ್ತು ಪಲಾವ್ ಎಲೆ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ನಂತರ ಹಸಿರು ಮೆಣಸಿನ ಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
* ನಂತರ ಟೊಮೆಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ (ಸಣ್ಣದಾಗಿ ಕಟ್ ಮಾಡಿರಬೇಕು)
* ಈಗ ಪುದಿನ, ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ. ದನಿಯಾ, ಗರಂ ಮಸಲಾ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಅದಕ್ಕೆ ಒಂದು ಗ್ಲಾಸ್ ಅಕ್ಕಿ ತೆಗೆದುಕೊಂಡಿದ್ದರೆ ಅದಕ್ಕೆ 2 ಗ್ಲಾಸ್ ನೀರು ಹಾಕಿ. (ನೀವು ಅಕ್ಕಿ ತೆಗೆದುಕೊಳ್ಳುವುದರ ಮೇಲೆ ನೀರು ಹಾಕಿಕೊಳ್ಳಬೇಕು.)
* ಮತ್ತೆ ಸ್ವಲ್ಪ ಪುದಿನ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ.
* ಕೊನೆಯಲ್ಲಿ ಬೇಯಿಸಿದ ಮೊಟ್ಟೆ ಹಾಕಿ ಕುಕ್ಕರ್ ಮುಚ್ಚಿ 2 ವಿಷಲ್ ಕೂಗಿಸಿದರೆ ರುಚಿಯಾದ ಎಗ್ ಬಿರಿಯಾನಿ ಸವಿಯಲು ಸಿದ್ಧ