ಬೆಂಗಳೂರು: ದೇಶಾದ್ಯಂತ ಇಂದು ವೈದ್ಯ ಸಂಘಟನೆಗಳು ರಾಷ್ಟ್ರೀಯ ಪ್ರತಿಭಟನಾ ದಿನ ಆಚರಿಸುತ್ತಿವೆ. ಕರ್ನಾಟಕ ವೈದ್ಯರ ಪ್ರೋಟೆಸ್ಟ್ ಗೆ, ಸ್ಯಾಂಡಲ್ ವುಡ್ ಖ್ಯಾತ ನಟಿ ಆಶಿಕಾ ರಂಗನಾಥ್ ಬೆಂಬಲ ಸೂಚಿಸಿದ್ದಾರೆ.
ಈ ಪ್ರತಿಭಟನೆ ಬಗ್ಗೆ ಮಾತನಾಡಿರುವ ಅವರು, ಡಾಕ್ಟರ್ಸ್ ಎಂದರೆ ನನಗೆ ಮೊದಲು ನೆನಪಾಗುವ ಪದ ಸಂರಕ್ಷಕರು ಎಂದು. 14 ತಿಂಗಳಿನಿಂದ ಕೋವಿಡ್ ಮಹಾಮಾರಿಯ ಆರ್ಭಟ ನೆಡೆಯುತ್ತಿದೆ. ಈ ಸಂದರ್ಭದಲ್ಲಿ ಕುಟುಂಬದ ಜೊತೆ ತಮ್ಮ ಜೀವನವನ್ನು ಕೂಡ ಅಪಾಯಕ್ಕೆ ಒಡ್ಡಿಕೊಂಡು ಸಮಾಜಕ್ಕೋಸ್ಕರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೂ ಅಭಾರಿಯಾಗಿದ್ದೇನೆ. ಆರೋಗ್ಯ ಕಾರ್ಯಕರ್ತರ ಪ್ರಯತ್ನ ಮತ್ತು ಸೇವಾ ಮನೋಭಾವಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಡಾಕ್ಟರ್ಸ್‍ಗಳ ಮೇಲಿನ ಹಲ್ಲೆ ಖಂಡಿಸಿ, ಜನರಲ್ಲಿ ಸಾಮಾಜಿಕ ತಿಳುವಳಿಕೆ ಮೂಡಿಸಲು ಪ್ರತಿಭಟನೆ ನಡೆಸಲಾಗುತ್ತಿದೆ. ಈ ಜಾಗೃತಿ ಕಾರ್ಯಕ್ರಮಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ. ಎಲ್ಲರೂ ಕೂಡ ಬೆಂಬಲ ನೀಡಿ ಎಂದು ಮನವಿಮಾಡಿದ್ದಾರೆ. ನಮ್ಮ ಡಾಕ್ಟರ್ಸ್‍ನ ನಾವು ಉಳಿಸಿಕೊಳ್ಳೋಣ, ಅವರ ಪ್ರಯತ್ನಗಳನ್ನು ಶ್ಲಾಘಿಸೋಣ… #Save the Saviours# ಎನ್ನುವ ಹ್ಯಾಶ್ ಟ್ಯಾಗ್ ಮುಖಾಂತರ ಈ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಟಾಪ್‍ಲೆಸ್ ಫೋಟೋ ಶೂಟ್‍ನಲ್ಲಿ ನಟಿ ಕಿಯಾರಾ ಅಡ್ವಾಣಿ ಸಖತ್ ಹಾಟ್