ನೆಲಮಂಗಲ: ಅತಿ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಹಾನ್ ಚೇತನ ಸಂಚಾರಿ ವಿಜಯ್, ರಾಷ್ಟ್ರಪ್ರಶಸ್ತಿ ನೆನಪಿದೆ ಆದರೆ ವ್ಯಕ್ತಿ ಇಲ್ಲ ಎಂದು ಹೇಳುತ್ತ ವಿಜಯ್ ನಿಧನಕ್ಕೆ ಸ್ಯಾಂಡಲ್‍ವುಡ್ ನಟ ವಿನೋದ್ ರಾಜ್ ಸಂತಾಪ ಸೂಚಿಸಿದ್ದಾರೆ.
Advertisement
ಬೆಂಗಳೂರು ಹೊರಹೊಲಯದ ನೆಲಮಂಗಲದಲ್ಲಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಚಾರಿ ವಿಜಯ್ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಹಾನ್ ಚೇತನ ಆಗಿದ್ದರು. ರಾಷ್ಟ್ರಪ್ರಶಸ್ತಿ ನೆನಪಿದೆ ಆದರೆ ವ್ಯಕ್ತಿ ಇಲ್ಲ, ಚಿಕ್ಕ ವಯಸ್ಸಿನಲ್ಲೇ ನಮ್ಮೆಲ್ಲರನ್ನು ನೋವಿನ ಕಡಲಲ್ಲಿ ಬಿಟ್ಟು ಹೋದರು ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾವಿಬ್ಬರೂ ಬ್ಯಾಡ್ಮಿಂಟನ್ ಆಡ್ತಾ ಇದ್ವಿ, ತುಂಬಾ ದುಃಖವಾಗ್ತಿದೆ- ಪ್ರಜ್ವಲ್ ಸಂತಾಪ
Advertisement
Advertisement
ಅವರ ಮನೆಯಲ್ಲಿ ಎಷ್ಟು ನೋವಿದೆಯೋ ಪ್ರತಿಯೊಬ್ಬ ಕಲಾವಿದನಲ್ಲೂ ಅಷ್ಟು ನೋವಿದೆ. ಒಮ್ಮೆ ನ್ಯಾಷನಲ್ ಅವಾರ್ಡ್ ತೆಗೆದುಕೊಂಡಿದ್ದು ತಪ್ಪಾಯ್ತು ಅಂತ ಬೇಸರ ಹೊರಹಾಕಿದ್ದರು. ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕಾಗಿತ್ತು. ಅದೇ ರೀತಿಯಲ್ಲಿ ನಾನು ಕೂಡ ಅವಕಾಶ ಇಲ್ಲದೆ ವಾಪಸ್ ಬಂದವನು. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ, ಆತ್ಮಕ್ಕೆ ಶಾಂತಿ ಸಿಗಲೇಂದು ದೇವರಲ್ಲಿ ಪ್ರಾರ್ಥಿಸುವೆ ಎಂದುಕಂಬನಿ ಮಿಡಿದಿದ್ದಾರೆ.
Advertisement
ವಿ.ಸೋಮಣ್ಣ ಸಂತಾಪ:
ಸಂಚಾರಿ ವಿಜಯ್ ನನಗೂ ಕೂಡ ಆತ್ಮೀಯರು. ಹಲವು ಭಾರಿ ವೈಯಕ್ತಿಕವಾಗಿ ಅವರನ್ನ ಭೇಟಿ ಮಾಡಿದ್ದೇನೆ. ಸಂಚಾರಿ ವಿಜಯ್‍ಗೆ ಸಂಚಾರಿ ವಿಜಯ್ ಒಬ್ಬರೇ ಸಾಟಿ. ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿದ್ದ ಅವರು ಅಕಾಲಿಕ ಮರಣಕ್ಕೆ ತುತ್ತಾಗಿರೋದು ಮನಸ್ಸಿಗೆ ನೋವುಂಟು ಮಾಡಿದೆ. ಯಾರೇ ಆದರೂ ಕಾನೂನು ಮತ್ತು ಸುವ್ಯವಸ್ಥೆ ನಿರ್ಲಕ್ಷ್ಯ ಆದ್ರೆ ಏನಾಗುತ್ತೆ ಅನ್ನುವುದಕ್ಕೆ ಸಂಚಾರಿ ವಿಜಯ್ ಉದಾಹರಣೆಯಾಗಿದ್ದಾರೆ. ಸಂಚಾರಿ ವಿಜಯ್ ನಿಧನದಿಂದ ಕನ್ನಡ ಚಿತ್ರಂಗಕ್ಕೆ ತುಂಬಲಾಗದ ನಷ್ಟವಾಗಿದೆ. ರಾಜ್ಯದಲ್ಲಿ ಹತ್ತಾರು ಜನ ಸಂಚಾರಿ ವಿಜಯ್ ಆಗಬೇಕು. ವಿಜಯ್ ನಿಧನದಲ್ಲೂ ಕುಟುಂಬ ಸಾರ್ಥಕತೆ ಮೆರೆದಿದ್ದಾರೆ. ಮರಣದ ಬಳಿಕ ಅಂಗಾಂಗ ದಾನ ಮಾಡಿರೋದು ನೋವಿನಲ್ಲೂ ಆನಂದ ತಂದ ವಿಚಾರ. ಇಂತಹ ನಿರ್ಧಾರ ಕೈಗೊಂಡ ಅವರ ಕುಟುಂಬಕ್ಕೆ ಕೋಟಿ ಕೋಟಿ ಧನ್ಯವಾದಗಳು. ಕುಟುಂಬಕ್ಕೆ ಸಂಚಾರಿ ವಿಜಯ್ ಅಗಲಿಕೆ ನೋವನ್ನ ಮರೆಸುವ ಶಕ್ತಿ ದೇವರು ಕರುಣಿಸಲಿ, ವಿಜಯ್ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಸತಿ ಸಚಿವ ವಿ.ಸೋಮಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.