ರಾಯರ 349ನೇ ಆರಾಧನೆಗೆ ಭಕ್ತರಿಗೆ ಪ್ರವೇಶವಿಲ್ಲ

Public TV
1 Min Read
mantralaya 1

– ಮಂತ್ರಾಲಯ ವಾಹಿನಿಯಲ್ಲಿ ನೇರಪ್ರಸಾರ

ರಾಯಚೂರು: ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವ ಆಗಸ್ಟ್ 2 ರಿಂದ 8 ರವರೆಗೆ ನಡೆಯಲಿದೆ. ಆದ್ರೆ ಕೊರೊನಾ ಬಾಧೆ ಹಿನ್ನೆಲೆ ಈ ಬಾರಿ ಮಂತ್ರಾಲಯ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ. ಹೀಗಾಗಿ ಮಠದ ಆಡಳಿದ ಮಂಡಳಿ ಆರಾಧನಾ ಸಪ್ತರಾತ್ರೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನ ಮಠದ ಅಧಿಕೃತ ಯೂ ಟ್ಯೂಬ್ ಚಾನಲ್ “ಮಂತ್ರಾಲಯ ವಾಹಿನಿ”ಯಲ್ಲಿ ನೇರಪ್ರಸಾರ ಮಾಡಲು ನಿರ್ಧರಿಸಿದೆ.

mantralaya

ಆರಾಧನಾ ಮಹೋತ್ಸವಕ್ಕೆ ಮಠದಲ್ಲಿ 50 ಕ್ಕಿಂತ ಕಡಿಮೆ ಜನರಿಗೆ ಮಾತ್ರ ಅವಕಾಶ ಇರುವುದರಿಂದ ಯಾವುದೇ ಭಕ್ತರು ಮಠಕ್ಕೆ ಬರುವುದು ಬೇಡ. ಅಲ್ಲದೆ ನಾನಾ ರಾಜ್ಯಗಳಲ್ಲಿ ಕೊರೊನಾ ಹಿನ್ನೆಲೆ ಅಂತರರಾಜ್ಯ ಓಡಾಟಕ್ಕೆ ನಿರ್ಭಂದ ಹೇರಿವೆ. ಹೀಗಾಗಿ ಖಾಸಗಿ ವಾಹನ, ಸ್ವಂತ ವಾಹನ, ಪಾದಯಾತ್ರೆ ಸೇರಿದಂತೆ ಯಾವುದೇ ರೀತಿಯಲ್ಲಿ ಭಕ್ತರು ಮಠಕ್ಕೆ ಬರುವುದು ಬೇಡ. ಇದ್ದ ಜಾಗದಲ್ಲೇ ರಾಯರನ್ನ ಸ್ಮರಿಸಿ ಆರಾಧನೆ ಮಾಡಬೇಕು ಅಂತ ಮನವಿ ಮಾಡಲಾಗಿದೆ.

Mantralaya

ಮಂತ್ರಾಲಯ ಮಠದ ಪ್ರಾಕಾರದಲ್ಲಿ ಮಾತ್ರ ಕಾರ್ಯಕ್ರಮಗಳು ನಡೆಯುತ್ತಿದ್ದು ಧಾರ್ಮಿಕ, ಆಧ್ಯಾತ್ಮಿಕ, ಉತ್ಸವ, ಪ್ರವಚನ ಸೇರಿ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರ ಮಾಡಲಾಗುವುದು. ಒಂದು ವೇಳೆ ಭಕ್ತರು ಮಠಕ್ಕೆ ಬಂದರೆ ಇಲ್ಲಿ ವಸತಿ ವ್ಯವಸ್ಥೆಯೂ ಇಲ್ಲಾ, ದರ್ಶನಕ್ಕೂ ಅವಕಾಶವಿಲ್ಲ. ಕೊರೊನಾ ಮುಗಿದ ಬಳಿಕ ಭಕ್ತರಿಗಾಗಿ ಆರಾಧನಾ ಸಂಸ್ಮರಣೋತ್ಸವ ಕಾರ್ಯಕ್ರಮವನ್ನ ಆಯೋಜಿಸಲಾಗುವುದು ಇದರಲ್ಲಿ ಎಲ್ಲಾ ಭಕ್ತರು ಭಾಗವಹಿಸಬಹುದು ಅಂತ ಮಂತ್ರಾಲಯ ಮಠದ ಆಡಳಿತ ಮಂಡಳಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *