ಲಕ್ನೊ: ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ರಾಮಮಂದಿರಕ್ಕೆ ಮೊದಲ ಬಹುಮಾನ ದೊರೆತಿದೆ. ಈ ವಿಚಾರವನ್ನು ಉತ್ತರ ಪ್ರೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
Advertisement
ಗಣರಾಜ್ಯೋತ್ಸವದಂದು ರಾಜ್‍ಪಥ್‍ನಲ್ಲಿ ಉತ್ತರ ಪ್ರದೇಶದಿಂದ ಪ್ರದರ್ಶಿಸಲಾದ ರಾಮಮಂದಿರ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ಬಂದಿದೆ. ಉತ್ತರ ಪ್ರದೇಶದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಗಣರಾಜ್ಯೋತ್ಸವದಲ್ಲಿ ಮೊದಲ ಸ್ಥಾನಗಳಿಸಿದ ಸ್ತಬ್ಧಚಿತ್ರಕ್ಕೆ ಯೋಗಿ ಆದಿತ್ಯನಾಥ್ ಅವರಿಗೆ ಪ್ರಶಸ್ತಿಯನ್ನು ಕೊಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ.
Advertisement
Advertisement
ಗಣರಾಜ್ಯೋತ್ಸವದ ದಿನ ಸ್ತಬ್ಧಚಿತ್ರ ಮೆರವಣೆಗೆಯಲ್ಲಿ ಉತ್ತರಪ್ರದೇಶದಿಂದ ಭಾಗವಹಿಸಿದ್ದ ಸ್ತಬ್ಧಚಿತ್ರದಲ್ಲಿ ಮುಂಭಾಗದಲ್ಲಿ ರಾಮಾಯಾಣ ಕೃತಿ ರಚಿಸಿದ ಮಹರ್ಷಿ ವಾಲ್ಮೀಕಿಯವರನ್ನು ಹಾಗೂ ನಿರ್ಮಾಣ ಕಾರ್ಯದಲ್ಲಿರುವ ರಾಮಮಂದಿರ ಮಾದರಿಯನ್ನು ಇರಿಸಲಾಗಿತ್ತು. ಈ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ಸಿಕ್ಕಿದೆ.
Advertisement
गणतंत्र दिवस के अवसर पर प्रदर्शित उत्तर प्रदेश की ‘अयोध्या: उत्तर प्रदेश की सांस्कृतिक धरोहर’ नामक मनोहारी झांकी को देश में प्रथम स्थान प्राप्त होने पर सभी प्रदेशवासियों को हार्दिक बधाई। pic.twitter.com/aeNpOtBXiC
— Yogi Adityanath (@myogiadityanath) January 28, 2021
ಕಳೆದ ವರ್ಷ ಉತ್ತರಪ್ರದೇಶ ಸ್ತಬ್ಧಚಿತ್ರಕ್ಕೆ 2ನೇ ಅತ್ಯುತ್ತಮ ಪ್ರಶಸ್ತಿ ಲಭಿಸಿತ್ತು. ಈ ಭಾರೀ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ತ್ರಿಪುರಕ್ಕೆ 2ನೇ ಅತ್ಯುತ್ತಮ ಪ್ರಶಸ್ತಿ ಹಾಗೂ ಉತ್ತರಾಖಂಡ್ ಮೂರನೇ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ.