ದೊಡ್ಮನೆಯ ಜೋಡಿ ಹಕ್ಕಿ ಅಂದರೆ ಅದು ದಿವ್ಯಾ ಹಾಗೂ ಅರವಿಂದ್. ಬಿಗ್‍ಬಾಸ್ ಮನೆಯಲ್ಲಿ ಎಲ್ಲಿ ನೋಡಿದರೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ ಹಗಲಲ್ಲಿ ಅಷ್ಟೇ ಅಲ್ಲದೇ ರಾತ್ರಿ ಕೂಡ ಮಾತನಾಡುತ್ತಿರುತ್ತಾರೆ ಎಂದು ಮನೆಯ ಮಂದಿ ಆರೋಪಿಸಿದ್ದಾರೆ. ಜೊತೆಗೆ ಇವರಿಬ್ಬರ ಪಿಸು ಮಾತಿನಿಂದ ರಾತ್ರಿ ಹೊತ್ತು ನಿದ್ರೆ ಮಾಡಲು ಆಗುತ್ತಿಲ್ಲ ಎಂದು ಸ್ಪರ್ಧಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸದ್ಯ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ ಕೊನೆಯ ಫನ್ ಡೇ ವಿತ್ ಕಿಚ್ಚ ಎಪಿಸೋಡ್‍ನಲ್ಲಿ ಸುದೀಪ್‍ರವರು, ರಾತ್ರಿ ಹೊತ್ತು ಬೆಡ್ ರೂಂನಲ್ಲಿ ದಿವ್ಯಾ ಯು ಆಡುವ ಪಿಸು ಮಾತುಗಳು ಎಷ್ಟು ಬೇರೆಯವರಿಗೆ ತೊಂದರೆ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ವೈಷ್ಣವಿ ನನಗೆ ಯಾವತ್ತು ತೊಂದರೆಯಾಗಿಲ್ಲ. ಆದರೆ ಶುಭಾಗೆ ಇವರ ಮಾತಿನಿಂದ ತುಂಬಾ ತೊಂದರೆಯಾಗಿದೆ. ಆಗ ಕೋಪದಿಂದ ಬೈದು ಬಿಡುತ್ತಾರೆ. ಎಷ್ಟೇ ಬಾರಿ ಮಾತನಾಡಬೇಡಿ ಅಂದರೂ, ಅವರು ಚರ್ಚೆಯನ್ನು ಮುಗಿಸಿಯೇ ಮಲಗುವುದು. ನನ್ನ ಬಳಿ ಅರವಿಂದ್‍ಗೆ ಗುಡ್ ನೈಟ್ ಹೇಳಿ ಬರುತ್ತೇನೆ ಎಂದು ಅರ್ಧಗಂಟೆ ನಂತರ ಬರುತ್ತಾರೆ ಎನ್ನುತ್ತಾರೆ.
ನಂತರ ಪ್ರಶಾಂತ್ ರಾತ್ರಿ 10 ನಿಮಿಷ ಮಾತನಾಡಿ ಹೋಗು ಎಂದು ಹೇಳುತ್ತೇನೆ. ಆಗ ಸರಿ ಹತ್ತು ನಿಮಿಷ ಮಾತನಾಡಿ ಹೋಗುತ್ತೇನೆ ಎಂದು ಮಾತನಾಡುತ್ತಲೇ ಇರುತ್ತಾರೆ. ನನಗೆ ಅವರು ಗುಸುಗುಸು ಮಾತುಗಳು, ಇಬ್ಬರು ಏನು ಜೋಕ್ ಮಾಡುತ್ತಾರೆ ಗೊತ್ತಿಲ್ಲ ಆದರೆ ಇಬ್ಬರು ಸಿಕ್ಕಾಪಟ್ಟೆ ಜೋರಾಗಿ ನಗುವುದು ಇದೆಲ್ಲಾ ಕೇಳಿ ಅಭ್ಯಾಸ ಆಗಿ ಹೋಗಿದೆ. 5 ನಿಮಿಷ ಎಂದು ಹೇಳಿ 20 ನಿಮಿಷ ಮಾತನಾಡುತ್ತಲೇ ಇರುತ್ತಾರೆ. ಕೊನೆಗೆ ಹೋಗಬೇಕಾದರೆ ಮಕ್ಕಳಂತೆ ಎರಡು ಕೆನ್ನೆಯನ್ನು ಮುದ್ದಾಗಿ ಮುಟ್ಟುತ್ತಾ ನಂತರ ಹೋಗಿ ಮಲಗುತ್ತಾರೆ ಎಂದಿದ್ದಾರೆ.
ಆಗ ಅರವಿಂದ್ ದಿವ್ಯಾ ಬಂದಿದ ತಕ್ಷಣವೇ ನಾನು ಹೋಗಿ ಮಲಗಿಕೋ ಎಂದು ಹೇಳುತ್ತೇನೆ. ಎಷ್ಟು ಬಾರಿ ಹೇಳಿದರೂ ಅದು ಹೇಳುವುದನ್ನು ಕೇಳುವ ಜಾತಿ ಅಲ್ಲ. ಕೈ ಮುಗಿದು ಹೋಗಿ ಮಲಗಿಕೋ ಅಂತ ಹೆಳುತ್ತೇನೆ. ಆದರೂ ಹೋಗಿ ಮಲಗುವುದಿಲ್ಲ. 2 ನಿಮಿಷ, 3 ನಿಮಿಷ, 5 ನಿಮಿಷ ಎಂದು ಮಾತನಾಡುತ್ತಿರುತ್ತಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಇವಾಗ್ಲೇ ಮದ್ವೆಗೆ ರೆಡಿ ಅಗಿದ್ದೀರಲ್ರೀ..