ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿರುವ ಕಾಟಾಚಾರದ ನೈಟ್ ಕರ್ಫ್ಯೂಗೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರದ ತರ್ಕರಹಿತವಾದ ಕರ್ಫ್ಯೂ ಆದೇಶವನ್ನು ಕಂಡ ನಂತರ ರಾತ್ರಿ ಮಾತ್ರ ಎಚ್ಚರವಾಗಿರೋಕೆ ಅದೇನು ಕರೋನಾನ ಇಲ್ಲ ಗೂಬೆನಾ ಎಂಬ ಅನುಮಾನ ನನ್ನ ಕಾಡತೊಡಗಿದ್ದು ಈ ಮಾತು ಹಾಸ್ಯವಾಗಿ ಕಂಡರೂ ನನ್ನಲ್ಲಿ ದಿಗಿಲು ಹುಟ್ಟಿಸಿದೆ ಟ್ವೀಟ್ ಮೂಲಕ ಹೆಚ್.ಸಿ.ಮಹದೇವಪ್ಪ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ರಾಜ್ಯ @BJP4Karnataka ಸರ್ಕಾರದ ತರ್ಕರಹಿತವಾದ ಕರ್ಫ್ಯೂ ಆದೇಶವನ್ನು ಕಂಡ ನಂತರ
ರಾತ್ರಿ ಮಾತ್ರ ಎಚ್ಚರವಾಗಿರೋಕೆ ಅದೇನು ಕರೋನಾನ ಇಲ್ಲ ಗೂಬೆನಾ ಎಂಬ ಅನುಮಾನ ನನ್ನ ಕಾಡತೊಡಗಿದ್ದು ಈ ಮಾತು ಹಾಸ್ಯವಾಗಿ ಕಂಡರೂ ನನ್ನಲ್ಲಿ ದಿಗಿಲು ಹುಟ್ಟಿಸಿದೆ
— Dr H.C.Mahadevappa (@CMahadevappa) December 23, 2020
9 ತಿಂಗಳ ಹಿಂದೆ ಕೊರೊನಾ ತಡೆಗಾಗಿ ಸರ್ಕಾರ ಮಾಡಿಕೊಂಡ ಯಡವಟ್ಟುಗಳು ಮತ್ತೆ ಪುನಾರವರ್ತನೆ ಆದಂತೆ ಭಾಸವಾಗುತ್ತಿದೆ. ಇಂದಿನಿಂದ ನೈಟ್‍ಕರ್ಫ್ಯೂ ಅಂತ ಹೇಳಿದ್ದ ಸರ್ಕಾರ ಸಂಜೆ ನಾಳೆಯಿಂದ ಅಂತ ಮಾರ್ಗಸೂಚಿಯಲ್ಲಿ ಪ್ರಕಟಿದೆ. ಜನಸಂಚಾರ ವಿರಳವಾಗಿರುವ ಮಧ್ಯರಾತ್ರಿ ಸರ್ಕಾರ ನೈಟ್‍ಕರ್ಫ್ಯೂ ಹೇರಿದ್ದು, ಎಲ್ಲ ವಿಧವಾದ ಚಟುವಟಿಕೆಗಳಿಗೂ ಅವಕಾಶ ನೀಡಿದೆ.
ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ನೈಟ್ ಕರ್ಫ್ಯೂ ಜಾರಿ: ಸುಧಾಕರ್
– 14 ದಿನಗಳಲ್ಲಿ ಯು.ಕೆ.ಯಿಂದ ಬಂದವರ ಮೇಲೆ ನಿಗಾhttps://t.co/S2gTqnFjwN#CoronaVirus #Covid19 #KSudhakar #NightCurfew #KarnatakaNightCurfew #CoronavirusStrain #CoronavirusStrainIndia @mla_sudhakar @CMofKarnataka @BSYBJP
— PublicTV (@publictvnews) December 23, 2020
ಸರ್ಕಾರದ ನೈಟ್‍ಕರ್ಫ್ಯೂ ಮಾರ್ಗಸೂಚಿಗಳು
* ರಾಜ್ಯದಲ್ಲಿ ನಾಳೆಯಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‍ಕಫ್ರ್ಯೂ ಜಾರಿಯಾಗಲಿದೆ.
* ಜನವರಿ 2ರಂದು ಬೆಳಗ್ಗೆ 5 ಗಂಟೆವರೆಗೆ ನೈಟ್‍ಕರ್ಫ್ಯೂ ಜಾರಿ
* ಕೈಗಾರಿಕೆ, ನೈಟ್ ಶಿಫ್ಟ್ ಆಧರಿತ ಕಂಪೆನಿಗಳಿಗೆ ಶೇ.50 ರಷ್ಡು ನೌಕರರ ಮೂಲಕ ಕಾರ್ಯಾಚರಣೆಗೆ ಅನುಮತಿ. ನೌಕರರು ಕಂಪೆನಿ, ಕೈಗಾರಿಕೆಗಳ ಐಡಿಕಾರ್ಡ್ ತೋರಿಸಿ ಹೋಗಬೇಕು. ಕೈಗಾರಿಕೆಗಳಿಗೆ 24/7 ಕಾರ್ಯನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ.
* ದೂರದ ಪ್ರಯಾಣದ ಬಸ್ ಮತ್ತು ರೈಲ್ವೇಗಳಿಗೆ ಅನುಮತಿ
* ಪಿಕಪ್ ಮತ್ತು ಡ್ರಾಪ್ ಗೆ ಮಾತ್ರ ಓಲಾ, ಉಬರ್, ಆಟೋಗಳ ಸಂಚಾರಕ್ಕೆ ಅವಕಾಶ
* ಬಸ್‍ನಿಲ್ದಾಣ, ರೈಲು ಸ್ಟೇಶನ್, ಏರ್ ಪೋರ್ಟ್ ಗಳಿಂದ ಪಿಕಪ್, ಡ್ರಾಪ್ ಗೆ ಮಾತ್ರ ಅವಕಾಶವಿದ್ದು, ಅಧಿಕಾರಿಗಳು ಕೇಳಿದಾಗ ಟಿಕೆಟ್ ತೋರಿಸವುದು ಕಡ್ಡಾಯ.
* ಷರತ್ತು, ನಿರ್ಬಂಧಗಳೊಂದಿಗೆ ಹೊಸ ವರ್ಷಾಚರಣೆ, ಕ್ರಿಸ್ ಮಸ್ ಗೆ ಅವಕಾಶ
* ಸರಕು ಸಾಗಣೆ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ.
ಗಮನಿಸಿ, ಇಂದಿನಿಂದಲ್ಲ ನಾಳೆ ರಾತ್ರಿ 11ರಿಂದ ನೈಟ್ ಕರ್ಫ್ಯೂhttps://t.co/oJEJJ8DQV2#Bengaluru #CoronaVirus #Covid19 #BSYeddyurappa #KSudhakar #NightCurfew #KarnatakaNightCurfew #CoronavirusStrain #CoronavirusStrainIndia
— PublicTV (@publictvnews) December 23, 2020