ಹಾವೇರಿ: ರಾಜ್ಯ ಹೆದ್ದಾರಿ ಅಗಲೀಕರಣ ಹಿನ್ನೆಲೆಯಲ್ಲಿ ಬೆಳೆದು ನಿಂತಿರೋ ಮರಗಳನ್ನು ಕಡಿದು ಹಾಕಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ಇರುವ ಸಮ್ಮಸಗಿ ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ ಅಗಲೀಕರಣ ವೇಳೆ ಮರಗಳನ್ನು ಕಡಿಯಲಾಗುತ್ತಿದೆ.
Advertisement
ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿರೋ ದೊಡ್ಡ ದೊಡ್ಡ ಮರಗಳಿಗೆ ಕೊಡಲಿ ಪೆಟ್ಟು ಹಾಕಲಾಗುತ್ತಿದೆ. ಈಗಾಗಲೇ ಕೆಲವೊಂದು ಮರಗಳನ್ನ ಕಡಿದು ಹಾಕಲಾಗಿದ್ದು, ಇನ್ನೂ ಸಾಕಷ್ಟು ಮರಗಳನ್ನ ಕಡಿಯೋ ಪ್ರಕ್ರಿಯೆ ಮುಂದುವರಿದಿದೆ.
Advertisement
Advertisement
ಸುಮಾರು 30 ವರ್ಷಗಳಿಂದ ಬೆಳೆದು ನಿಂತಿರೋ ಹುಣಸೆಮರಗಳನ್ನ ಕಡಿಯುತ್ತಿರೋದಕ್ಕೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಇರುವ ನೂರಾರು ಮರಗಳಿಗೆ ಕೊಡಲಿ ಹಾಕಲಾಗುತ್ತಿದೆ. ಪ್ರತಿವರ್ಷ ಅರಣ್ಯ ಇಲಾಖೆ ಸಾವಿರಾರು ರೂಪಾಯಿ ಆದಾಯ ಸರ್ಕಾರಕ್ಕೆ ಬರುತಿತ್ತು. ಈಗ ರಾಜ್ಯಹೆದ್ದಾರಿ ನೆಪದಲ್ಲಿ ಮರಗಳ ಕತ್ತರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement