– ಆತ್ಮನಿರ್ಭರ ಅಲ್ಲ, ಆತ್ಮ ಬರ್ಬಾದ್ ಬಜೆಟ್
ಮೈಸೂರು : ನಿರ್ಮಲಾ ಸೀತರಾಮನ್ ಅವರೇ ನಮ್ಮ ರಾಜ್ಯದ ಭಿಕ್ಷೆಯಿಂದ ನೀವು ರಾಜ್ಯಸಭಾ ಸದಸ್ಯೆಯಾಗಿದ್ದೀರಿ. ಆದರೆ ಕರ್ನಾಟಕದ ಬಗ್ಗೆ ಕಿಂಚಿತ್ತು ಕೃತಜ್ಞತೆ ನಿಮಗೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ.
Advertisement
ಕೇಂದ್ರದ ಬಜೆಟ್ ಕುರಿತಂತೆ ಮೈಸೂರಿನಲ್ಲಿ ಮಾತನಾಡಿದ ಎಂ. ಲಕ್ಷ್ಮಣ್, ನಿರ್ಮಲಾ ಸೀತರಾಮನ್ ಅವರೇ ನೀವೂ ಮೂಲತಃ ತಮಿಳುನಾಡಿನವರು. ಅಲ್ಲಿಯ ಚುನಾವಣೆಯ ಕಾರಣ ತಮಿಳುನಾಡಿಗೆ 6.2 ಲಕ್ಷ ಕೋಟಿ ಅನುದಾನ ಕೊಟ್ಟಿದ್ದೀರಿ. ಆದರೆ ಕರ್ನಾಟಕಕ್ಕೆ 14 ಸಾವಿರ ಕೋಟಿ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದೀರಿ. ಇದು ನ್ಯಾಯನಾ ಎಂದು ಪ್ರಶ್ನಿಸಿದರು. ರಾಜ್ಯದ ಬಿಜೆಪಿ ಮುಖಂಡರೇ ನಿಮಗೆ ಮಾನ ಮರ್ಯಾದೆ ಇದ್ದರೆ ಈ ಬಗ್ಗೆ ಉತ್ತರ ಕೊಡಿ. ಇದು ಆತ್ಮನಿರ್ಭರ್ ಬಜೆಟ್ ಅಲ್ಲ, ಆತ್ಮ ಬರ್ಬಾದ್ ಬಜೆಟ್ ಎಂದು ಹೇಳಿದರು.
Advertisement
Advertisement
ಜನಸಾಮಾನ್ಯರು ಎಚ್ಚರದಿಂದ ಇರಿ, ಬ್ಯಾಂಕಿನಲ್ಲಿ ನೀವೂ ಇಟ್ಟ ಫಿಕ್ಸೈಡ್ ಡೆಪೊಸಿಟ್‍ಗೂ ಸರ್ಕಾರ ಕೈ ಹಾಕುತ್ತದೆ. ಅಲ್ಪ ಸ್ವಲ್ಪ ಹಣ ಕೂಡಿಟ್ಟ ನಿಮ್ಮ ಹಣಕ್ಕೂ ಕತ್ತರಿ ಬೀಳುತ್ತದೆ. ಇದು ಇನ್ನೂ 6 ತಿಂಗಳಲ್ಲಿ ನಿಮ್ಮ ಹಣಕ್ಕೆ ಕೇಂದ್ರ ಕೈ ಹಾಕಿದರೂ ಅಚ್ಚರಿ ಇಲ್ಲ. ಜನಸಾಮಾನ್ಯರು ಈಗಲೇ ಈ ಬಗ್ಗೆ ಎಚ್ಚರ ವಹಿಸಿ ಎಂದರು.
Advertisement
ಬಿಜೆಪಿ ಸರ್ಕಾರ ದೇಶದ ಜನರನ್ನು ಭಿಕ್ಷೆ ಬೇಡುವಂತಹ ಸ್ಥಿತಿಗೆ ತಂದು ಬಿಡುತ್ತದೆ. ಆ ದಿನ ಕೂಲಿ ಮಾಡಿ ತಿನ್ನಬೇಕು. ಏನು ಸಂಪಾದನೆ ಮಾಡಬಾರದು. ಇಂತಹ ಅಜೆಂಡ ಬಿಜೆಪಿ ಇಟ್ಟುಕೊಂಡು ಆಡಳಿತ ನಡೆಸುತ್ತಿದೆ. ಎಲ್‍ಐಸಿಯನ್ನು ಖಾಸಗಿಕರಣ ಮಾಡುತ್ತಿದೆ. ಮೂರು ಬ್ಯಾಂಕ್ ಗಳ ಖಾಸಗಿ ಅನುಮೋದನೆ ಪಡೆದುಕೊಂಡಿದ್ದಾರೆ. ಜನರನ್ನು ಭಿಕ್ಷೆ ಬೇಡುವ ಸ್ಥಿತಿಗೆ ಬಿಜೆಪಿ ಇನ್ನೆರಡು ವರ್ಷದಲ್ಲಿ ತರುವ ಅಜೆಂಡ ಇಟ್ಟುಕೊಂಡಿದೆ ಎಂದರು.