ಬೆಂಗಳೂರು: ಕೊರೊನಾದಿಂದಾಗಿ ಮುಚ್ಚಿದ್ದ ಚಿತ್ರಮಂದಿರಗಳು ಕೇಂದ್ರ ಸರ್ಕಾರದ ಅನ್‍ಲಾಕ್ 5ರ ಮಾರ್ಗ ಸೂಚಿಯಂತೆ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಚಿತ್ರಮಂದಿರ ಅವಕಾಶ ಕೊಟ್ಟಿತ್ತು. ಇದೀಗ ಪೂರ್ಣವಾಗಿ ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಶಾಸಕರೊಬ್ಬರು ಬಿಎಸ್‍ವೈ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಪ್ರಸ್ತುತ ಈಗ ಶೇ.50 ರಷ್ಟು ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಕೊರೊನಾದ ಅಲೆಯಿಂದಾಗಿ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದ್ದು ಇನ್ನೂ ಚೇತರಿಸಿಕೊಂಡಿಲ್ಲ. ಹಾಗಾಗಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ಟು ಈ ನಷ್ಟವನ್ನು ಸರಿದೂಗಿಸಬೇಕೆಂದು ಶಾಸಕರ ಸಭೆಯಲ್ಲಿ ಮಲೆನಾಡು ಭಾಗದ ಶಾಸಕರೊಬ್ಬರು ಬಿಎಸ್‍ವೈ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶೀಘ್ರದಲ್ಲೇ ಇದರ ಕುರಿತು ನಿರ್ಧಾರ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕೆಲದಿನಗಳ ಹಿಂದೆ ಚಿತ್ರಮಂದಿರಗಳಿಗೆ ಶೇ.100 ಪ್ರೇಕ್ಷಕರಿಗೆ ವಿನಾಯಿತಿ ಕೊಡಬೇಕೆಂದು ತಮಿಳು ನಟ ವಿಜಯ್ ತಮಿಳುನಾಡು ಸರ್ಕಾರವನ್ನು ಮನವಿ ಮಾಡಿಕೊಂಡಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಸರ್ಕಾರ ಜನವರಿ 14ರ ಸಂಕ್ರಾಂತಿಹಬ್ಬದಂದು ಬಿಡುಗಡೆಯಾಗುವ ಸಿನಿಮಾಗಳಿಗೆ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ.