– ಇಂದು 119 ಮಂದಿ ಕೋವಿಡ್ 19ಗೆ ಬಲಿ
ಬೆಂಗಳೂರು: ರಾಜ್ಯದಲ್ಲಿ ಇಂದು 8,44 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 4,67,689ಕ್ಕೆ ಏರಿಕೆಯಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 119 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 7,384 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
Advertisement
ಇಂದು ರಾಜ್ಯದಲ್ಲಿ 8,865 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 4,67,689 ಸೋಂಕಿತರ ಪೈಕಿ 98,463 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 8,865 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 800 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಇಂದು 16,296 ಮಂದಿಯ ರ್ಯಾಪಿಡ್ ಟೆಸ್ಟ್ ನಲ್ಲಿ 29,665 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 65,961 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 1300347 ಮಂದಿಗೆ ರ್ಯಾಪಿಡ್ ಟೆಸ್ಟ್, 25,46,590 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 38,46,937 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಂದು 2,966 ಮಂದಿಗೆ ಸೋಂಕು ದೃಢವಾಗಿದ್ದು, 37 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,73,628ಕ್ಕೆ ಏರಿಕೆ ಆಗಿದೆ. ಬಳ್ಳಾರಿ 264, ಬೆಂಗಳೂರು ಗ್ರಾಮಾಂತರ 275, ದಕ್ಷಿಣ ಕನ್ನಡ 413, ದಾವಣಗೆರೆ 325, ಹಾಸನ 295, ಹಾವೇರಿ 208 ಮಂದಿಯಲ್ಲಿ ಇಂದು ಸೋಂಕು ಪತ್ತೆಯಾಗಿದೆ.
ಬಾಗಲಕೋಟೆ 146, ಬಳ್ಳಾರಿ 274, ಬೆಳಗಾವಿ 533, ಬೆಂಗಳೂರು ಗ್ರಾಮಾಂತರ 24, ಬೆಂಗಳೂರು ನಗರ 3,495, ಬೀದರ್ 107, ಚಾಮರಾಜನಗರ 49, ಚಿಕ್ಕಬಳ್ಳಾಪುರ 95, ಚಿಕ್ಕಮಗಳೂರು 223, ಚಿತ್ರದುರ್ಗ 14, ದಕ್ಷಿಣ ಕನ್ನಡ 297, ದಾವಣಗೆರೆ 129, ಧಾರವಾಡ 248, ಗದಗ 184, ಹಾಸನ 332, ಹಾವೇರಿ 185, ಕಲಬುರಗಿ 209, ಕೊಡಗು 29, ಕೋಲಾರ 78, ಕೊಪ್ಪಳ 141, ಮಂಡ್ಯ 180, ಮೈಸೂರು 945, ರಾಯಚೂರು 135, ರಾಮನಗರ 47, ಶಿವಮೊಗ್ಗ 282, ತುಮಕೂರು 248, ಉಡುಪಿ 0, ಉತ್ತರ ಕನ್ನಡ 99, ವಿಜಯಪುರ 68, ಯಾದಗಿರಿ 69 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದಿನ 14/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/NvOANHtI1M pic.twitter.com/tE7tRUmPB4
— K'taka Health Dept (@DHFWKA) September 14, 2020