ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಲಾಕ್‍ಡೌನ್ ಜೊತೆ ನೈಟ್ ಕರ್ಫ್ಯೂ ಘೋಷಿಸಿದೆ. ಇಡೀ ರಾಜ್ಯದಲ್ಲಿ ವೀಕೆಂಡ್ ಲಾಕ್‍ಡೌನ್ ಘೋಷಣೆಯಾಗಲಿದ್ದು, ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6ರವರೆಗೆ ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ.
ವೀಕೆಂಡ್ ಲಾಕ್‍ಡೌನ್ ಜೊತೆ ಕೆಲ ಕಠಿಣ ನಿರ್ಧಾರಗಳನ್ನ ಸಹ ಸರ್ಕಾರ ಘೋಷಿಸಿದೆ. ಕೆಲ ಚಟುವಟಿಕೆಗಳ ಸಂಪೂರ್ಣ ನಿರ್ಬಂಧ ಹೇರಿದ್ದು, ಮತ್ತೆ ಕೆಲವೊಂದಿಷ್ಟಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ.
Advertisement
Advertisement
ಏನಿರಲ್ಲ?
* ಶಾಲೆ, ಕಾಲೇಜು, ತರಬೇತಿ ಕೇಂದ್ರಗಳು ಎಲ್ಲವೂ ಬಂದ್ ಆಗಲಿದೆ. ಆನ್‍ಲೈನ್ ಶಿಕ್ಷಣ ಮುಂದುವರಿಯಲಿದೆ.
* ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ, ಕ್ರೀಡಾ ಸ್ಟೇಡಿಯಂ, ಸ್ವಿಮ್ಮಿಂಗ್ ಪೂಲ್, ಪಾರ್ಕ್, ಬಾರ್ ಸೇರಿದಂತೆ ಜನ ಸೇರುವ ಸ್ಥಳಗಳಿಗೆ ನಿರ್ಬಂಧ
(ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಕ್ರೀಡೆಗಳಿಗೆ ತರಬೇತಿಗಾಗಿ ವಿನಾಯ್ತಿ)
* ಸಾಮಾಜಿಕ/ಧಾರ್ಮಿಕ/ರಾಜಕೀಯ/ಕ್ರೀಡಾ/ಮನರಂಜನಾ/ಶೈಕ್ಷಣಿಕ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ನಿಬರ್ಂಧ
* ತರಬೇತಿಗಾಗಿ ಮಾತ್ರ ಕ್ರೀಡಾ ಮೈದಾನಗಳು ತೆರೆದಿರುತ್ತವೆ.
* ಎಲ್ಲ ಧಾರ್ಮಿಕ ಕೇಂದ್ರಗಳು ಬಂದ್
Advertisement
Advertisement
ಏನಿರುತ್ತೆ?
* ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕೇವಲ ಪಾರ್ಸೆಲ್ ಗೆ ವ್ಯವಸ್ಥೆ
* ವೀಕೆಂಡ್ ಹೊರತು ಪಡಿಸಿ ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಗೆ ವ್ಯವಸ್ಥೆ
* ಕಟ್ಟಡ ಕಾಮಗಾರಿಗಳಿಗೆ ಅನುಮತಿ
* ದಿನಸಿ, ಹಣ್ಣು, ತರಕಾರಿ, ಹಾಲು, ಔಷಧಿ ಸೇರಿದಂತೆ ಮೂಲಭೂತ ಸೌಲಭ್ಯಗಳು
* ಬ್ಯಾಂಕ್, ವಿಮೆ ಕಚೇರಿ, ಎಟಿಎಂ
* ಇ ಕಾಮರ್ಸ್, ಕೋಲ್ಡ್ ಸ್ಟೋರೇಜ್, ವೇರ್ ಹೌಸಿಂಗ್
* ಮದುವೆಗೆ ಕೇವಲ 50 ಮಂದಿಗೆ ಮಾತ್ರ ಅವಕಾಶ. ಅಂತ್ಯಕ್ರಿಯೆಗೆ ಕೇವಲ 20 ಜನಕ್ಕೆ ಅನುಮತಿ
* ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ಇಲ್ಲ
* ಸರ್ಕಾರಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿಗೆ ಅವಕಾಶ
* ಐಟಿ-ಬಿಟಿ ವರ್ಕ್ ಫ್ರಮ್ ಹೋಂಗೆ ಆದ್ಯತೆ ನೀಡುವುದು.
* ಬ್ಯಾಂಕ್, ಎಟಿಎಂ ಕೇಂದ್ರಗಳು, ವಿಮೆ ಸಂಸ್ಥೆಗಳು, ಮಾಧ್ಯಮಗಳು, ಇ-ಕಾಮರ್ಸ್‍ನ ಹೋಂ ಡೆಲಿವರಿಗೆ ಅವಕಾಶ
* ಸೆಲೂನ್ ಶಾಪ್‍ಗಳು, ಸ್ಪಾ, ಬ್ಯೂಟಿ ಪಾರ್ಲರ್ ಗಳಿಗೆ ಅವಕಾಶ.
* ತರಕಾರಿ, ಹಣ್ಣುಗಳ ಮಾರುಕಟ್ಟೆಗಳು, ಕೃಷಿ ಮಂಡಿಗಳು, ಇ-ಮಾರ್ಕೆಟ್ ಗಳು, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮಳಿಗೆಗಳು ಅಬಾಧಿತ.
* ಮೀನುಗಾರಿಕೆ ಅವಲಂಬಿತ ಎಲ್ಲ ಚಟುವಟಿಕೆಗಳೂ ಅಭಾದಿತ.
* ಪಶುಸಂಗೋಪನೆ ವಲಯದಲ್ಲೂ ಎಲ್ಲಾ ಬಗೆಯ ಕಾರ್ಯಚಟುವಟಿಕೆ, ವಹಿವಾಟುಗಳಿಗೂ ಅವಕಾಶ.
ನೈಟ್ ಕರ್ಫ್ಯೂ ಹೇಗಿರಲಿದೆ?
* ಸಕಾರಣ ಇದ್ದರೆ ಮಾತ್ರ ಸಮೂಹ ಸಾರಿಗೆಗಳು, ಆಟೋ, ಮ್ಯಾಕ್ಸಿ ಕ್ಯಾಬ್ ಗಳು, ಸ್ವಂತ ವಾಹನಗಳ ಮೂಲಕ ಓಡಾಡಲು ಅವಕಾಶ.
* ಸಾರ್ವಜನಿಕರು ಮತ್ತು ಸರಕು ಸಾಗಣೆ ವಾಹನಗಳಿಗೆ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳ ಓಡಾಟಕ್ಕೆ ನಿರ್ಬಂಧ ಇಲ್ಲ. ಓಡಾಟಕ್ಕೆ ವಿಶೇಷ ಅನುಮತಿ ಅನಗತ್ಯ.
* ಬಸ್ ಗಳಲ್ಲಿ ಸೀಟುಗಳ ಸಾಮರ್ಥ್ಯದಷ್ಟೇ ಪ್ರಯಾಣಿಕರಿಗೆ ಅವಕಾಶ.
* ಆಟೋ, ಕ್ಯಾಬ್, ಸ್ವಂತ ಕಾರುಗಳಲ್ಲಿ ಓಡಾಡುವರಿಗೆ ಸಾಮಾಜಿಕ ಅಂತರ ಕಡ್ಡಾಯ.
* ಸ್ವಂತ ವಾಹನಗಳಿದ್ದವರು ಅನಗತ್ಯ ಓಡಾಟಗಳಲ್ಲಿ ನಿಯಂತ್ರಣ ಹಾಕಿಕೊಳ್ಳಬೇಕು.
* ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಸಲ್ಟ್ ಕಡ್ಡಾಯ.
* ಸರಕು, ಸೇವೆ, ತುರ್ತು ಸೇವೆಯ ವಾಹನಗಳಿಗೆ ನಿರ್ಬಂಧ ಇಲ್ಲ.
ವೀಕೆಂಡ್ ಲಾಕ್‍ಡೌನ್ ಹೇಗಿರಲಿದೆ?
ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಇಡೀ ಕರುನಾಡು ಸ್ತಬ್ಧವಾಗಲಿದೆ. ತುರ್ತು ಸೇವೆ ಹೊರತು ಪಡಿಸಿ ಎಲ್ಲವೂ ಬಂದ್ ಆಗಲಿದೆ. ವೀಕೆಂಡ್ ಲಾಕ್‍ಡೌನ್ ದಿನ ಬೆಳಗ್ಗೆ ನಾಲ್ಕು ಗಂಟೆ ಅಂದ್ರೆ ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅನುಮತಿ ಕಲ್ಪಿಸಲಾಗಿದೆ. ಇನ್ನುಳಿದಂತೆ ಎಲ್ಲ ಸೇವೆಗಳು ಬಂದ್ ಇರಲಿದೆ.
ತರಕಾರಿ, ಹಣ್ಣು, ದಿನಸಿ, ಹಾಲಿನ ಕೇಂದ್ರಗಳು ಅಂದ್ರೆ ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ತೆರೆದಿರುತ್ತವೆ. ಹೋಟೆಲ್ ಗಳಿಗೆ ಪಾರ್ಸೆಲ್ ಗೆ ಮಾತ್ರ ಅವಕಾಶ. ಶನಿವಾರ, ಭಾನುವಾರ ಕಟ್ಟಡ ನಿರ್ಮಾಣ ಕಾಮಗಾರಿ ಬಂದ್ ಆಗಲಿದೆ. ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ.