ಮಡಿಕೇರಿ: ಕಾಂಗ್ರೆಸ್ ರಾಜ್ಯದಲ್ಲಿ ಪೂರ್ಣ ಹೋಗುವುದು ಬೇಡ, ಸಣ್ಣದಾಗಿಯಾದರೂ ಕಾಂಗ್ರೆಸ್ ಪಕ್ಷ ಉಳಿಯ ಬೇಕು ಎಂದು ಸಚಿವ ಈಶ್ವರಪ್ಪ ಕಾಂಗ್ರೆಸ್ ಕುರಿತು ವ್ಯಂಗ್ಯವಾಡಿದ್ದಾರೆ.
Advertisement
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ರಾಜ್ಯದಲ್ಲಿ ಜನ ಕಾಂಗ್ರೆಸ್ ಅನ್ನು ಮರೆಯುತ್ತಿದ್ದಾರೆ. ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಕಾಂಗ್ರೆಸ್ ರಾಜ್ಯದಲ್ಲಿ ಪೂರ್ಣ ಹೋಗುವುದು ಬೇಡ ಸಣ್ಣದಾಗಿಯಾದರೂ ಕಾಂಗ್ರೆಸ್ ಉಳಿಯಲಿ, ಬಿಜೆಪಿಯನ್ನು ನೋಡಿ ಇದ್ದಕ್ಕಿದ್ದಂತೆ ಕಾಂಗ್ರೆಸ್ ಸಮಾವೇಶ ಮಾಡಲು ಮುಂದಾಗಿದೆ. ಐದು ಪಸೆರ್ಂಟ್ ಆದರು ಕಾಂಗ್ರೆಸ್ ಪಕ್ಷ ಯಶಸ್ವಿಯಾಗಲಿ, ಅವರಿಗೆ ಒಳ್ಳೆಯದು ಅಗಲಿ. ಬಿಜೆಪಿಯ ದಿಕ್ಕಿನಲ್ಲಿ ಹೋಗಬೇಕೆಂದು ಪ್ರಯತ್ನಿಸುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
Advertisement
ಇನ್ನೂ 2023ಕ್ಕೆ ಕುಮಾರಸ್ವಾಮಿ ನಾನು ಸಿಎಂ ಆಗುತ್ತೇನೆ ಅಂತಾರೆ. ಸಿದ್ಧರಾಮಯ್ಯ ನಾನೇ ಸಿಎಂ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ. ಮುಖ್ಯಮಂತ್ರಿ ಆ ಸ್ಥಾನವೇ ಹಗಲು ರಾತ್ರಿ ಕನಸ್ಸಿನಲ್ಲಿ ಬರುತ್ತಿದೆ. ರಾಜ್ಯದಲ್ಲಿ ಎಲ್ಲಿ ಉಳಿದುಕೊಂಡಿದೆ ಅವರ ಪಾರ್ಟಿಗಳು ಎಂದು ಪ್ರಶ್ನಿಸಿದರು.
Advertisement
Advertisement
ಕಾಂಗ್ರೆಸ್ ನಲ್ಲಿ ಶಿವಕುಮಾರದು ಒಂದು ಬಣವಾದರೆ, ಸಿದ್ದರಾಮಯ್ಯನದು ಒಂದು ಬಣವಾಗಿದೆ. ಇಬ್ಬರ ಗುಂಪುಗಳು ಹೊಡೆದಾಡಿ ಬಡಿದಾಡಿಕೊಳ್ಳುತ್ತಿವೆ. ಇನ್ನು ಜೆಡಿಎಸ್ ನವರು ಎಲ್ಲರೂ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಅದರೂ ಮುಂದಿನ ಸಿಎಂ ನಾವೇ ಎಂದು ಹೇಳುತ್ತಿದ್ದಾರೆ. ಅದರೆ ಮುಂದಿನ ಬಾರಿ ಬಿಜೆಪಿ ಕಾರ್ಯಕರ್ತರ ಶ್ರಮದಿಂದ 150 ಹೆಚ್ಚು ಸ್ಥಾನ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.