– ಸೋಂಕಿತರ ಸಂಖ್ಯೆ 7,734ಕ್ಕೆ ಏರಿಕೆ
– 26 ವರ್ಷದ ಯುವಕ ಸೇರಿ 8 ಮಂದಿ ಬಲಿ
ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ಇಂದು 204 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7,734ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಿದೆ. ಕಳೆದ 24 ಗಂಟೆಯಲ್ಲಿ 55 ಮಂದಿಗೆ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ತೀವ್ರ ಜ್ವರದ ಗುಣಲಕ್ಷಣ ಇರುವ 13 ಮಂದಿ ಹಾಗೂ ಉಸಿರಾಟ ಸಮಸ್ಯೆ ಇರುವ 18 ಜನರು ಇದ್ದಾರೆ. ಉಳಿದಂತೆ ಸೋಂಕಿತ ವ್ಯಕ್ತಿಗಳ ಜೊತೆಗೆ ಸಂಪರ್ಕದಲ್ಲಿ ಇರದ ಐವರಿಗೆ ಕೋವಿಡ್-19 ತಗುಲಿರುವುದು ಖಚಿತವಾಗಿದೆ.
Advertisement
Advertisement
ಕಳೆದ ಕೆಲ ದಿನಗಳಿಂದ ಸಾವಿನ ವರದಿಯಾಗುತ್ತಲೇ ಇದ್ದು, ಇಂದು ಕೂಡ 26 ವರ್ಷದ ಯುವಕ ಸೇರಿ 8 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತ ಸಂಖ್ಯೆ 102ಕ್ಕೆ ಏರಿಕೆ ಕಂಡಿದೆ.
Advertisement
ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ ಪ್ರಕಾರ, ಬೆಂಗಳೂರು 55, ಯಾದಗಿರಿ 37, ಬಳ್ಳಾರಿ 29, ಕಲಬುರಗಿ 19, ಬೀದರ್ 12, ದಕ್ಷಿಣ ಕನ್ನಡ 8, ಧಾರವಾಡ 8, ಮಂಡ್ಯ 7, ಹಾಸನ 5, ಉಡುಪಿ 4, ಬಾಗಲಕೋಟೆ 4, ಶಿವಮೊಗ್ಗ 4, ದಾವಣಗೆರೆ 3, ಚಿಕ್ಕಬಳ್ಳಾಪುರ 3, ಉತ್ತರ ಕನ್ನಡ 3, ರಾಯಚೂರು, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
Advertisement
ಇಂದು ಪತ್ತೆಯಾದ 204 ಸೋಂಕಿತರ ಪೈಕಿ 106 ಮಂದಿ ಅಂತರಾಜ್ಯ ಹಾಗೂ ಇಬ್ಬರು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 348 ಜನರು ಕೊರೊನಾದಿಂದ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು 7,734 ಸೋಂಕಿತರಲ್ಲಿ 2,824 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 4,804 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು ಕೊರೊನಾ ತನ್ನ ಮರಣ ಕೇಕೆಯನ್ನು ಮುಂದುವರಿಸಿದ್ದು ಎಂಟು ಮಂದಿ ಸಾವನ್ನಪ್ಪಿರೋದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ.
ಇಬ್ಬರ ಸಾವು:
1. ರೋಗಿ-6008: ಬೆಂಗಳೂರಿನ 70 ವರ್ಷದ ವೃದ್ಧೆ. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಜೂನ್ 10ರಂದು ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
2. ರೋಗಿ-6861: ಬೆಂಗಳೂರಿನ 39 ವರ್ಷದ ಮಹಿಳೆ. ಅನಾರೋಗ್ಯ ಸಮಸ್ಯೆಯಿಂದಾಗಿ ಜೂನ್ 12ರಂದು ನಿಗಧಿತ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಸಾವನ್ನಪ್ಪಿದ್ದಾರೆ.
3. ರೋಗಿ-7573: ಶಿವಮೊಗ್ಗ ಜಿಲ್ಲೆಯ 56 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆಯಿಂದಾಗಿ ಜೂನ್ 13ರಂದು ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
4. ರೋಗಿ-7630: ಬೆಂಗಳೂರಿನ 64 ವರ್ಷದ ವೃದ್ಧ. ಅನಾರೋಗ್ಯದ ಹಿನ್ನೆಲೆ ಜೂನ್ 14ರಂದು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಚಿಕಿತ್ಸೆ ಫಲಿಸದೆ ಜೂನ್ 15ರಂದು ಮೃತಪಟ್ಟಿದ್ದರು. ಬಳಿಕ ಗಂಟಲು ದ್ರವ ಪರೀಕ್ಷೆ ಕಳಿಸಲಾಗಿತ್ತು. ಸದ್ಯ ರಿಪೋರ್ಟ್ ಪಾಸಿಟಿವ್ ಬಂದಿದೆ.
5. ರೋಗಿ-7631: ಬೆಂಗಳೂರಿನ 61 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆಯಿಂದ ಜೂನ್ 15ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
6. ರೋಗಿ-7636: ಬೆಂಗಳೂರಿನ 90 ವರ್ಷದ ವೃದ್ಧ. ತೀವ್ರ ಉಸಿರಾಟದ ತೊಂದರೆಯಿಂದ ಜೂನ್ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ.
7.ರೋಗಿ-7697: ಬೀದರ್ ಜಿಲ್ಲೆಯ 26 ವರ್ಷದ ಯುವಕ. ಜ್ವರದ ಕಾಣಿಸಿಕೊಂಡಿದ್ದರಿಂದ ಜೂನ್ 5ರಂದು ಕೋವಿಡ್ ಆಸ್ಪತ್ರೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಜೂನ್ 15ರಂದು ಮೃತಪಟ್ಟಿದ್ದರು. ಬಳಿಕ ಗಂಟಲು ದ್ರವ ಪರೀಕ್ಷೆ ಕಳಿಸಲಾಗಿತ್ತು. ಸದ್ಯ ರಿಪೋರ್ಟ್ ಪಾಸಿಟಿವ್ ಬಂದಿದೆ.
8. ರೋಗಿ-7724: ಬಳ್ಳಾರಿ ಜಿಲ್ಲೆಯ 62 ವರ್ಷದ ವೃದ್ಧ. ಜೂನ್ 16ರಂದು ಮೃತಪಟ್ಟಿದ್ದರು. ಬಳಿಕ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ರಿಪೋರ್ಟ್ ಪಾಸಿಟಿವ್ ಬಂದಿದೆ.