ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಕೇಸ್ ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕಳೆದ ಒಂದು ವಾರದಿಂದ ಕೇಸ್ ಗಳ ಸಂಖ್ಯೆಯಲ್ಲಿ ಏರಿಳಿಕೆಯಾಗ್ತಾ ಇದೆ. ಇಂದು 1600ಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗಿವೆ.
ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಕೊಂಚ ಏರಿಳಿಕೆಯಾಗ್ತಿದೆ. ಏರಿಳಿಕೆ ನೋಡ್ತಿದ್ರೆ ಮತ್ತೆ ಕೇಸ್ ಏರಿಕೆಯಾಗಿರುವುದು ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಇಂದು 1,674 ಕೇಸ್ ದಾಖಲಾಗಿದ್ದು, ಇಂದು ಕೊರೋನಾಗೆ 38 ಜನ ಬಲಿಯಾಗಿದ್ದಾರೆ. ಪಾಸಿಟಿವಿಟಿ ರೇಟ್ ಕೂಡ ಶೇ.1.38 ಗೆ ಇಳಿಕೆಯಾಗಿದೆ. ರಾಜ್ಯದಲ್ಲಿ ನೂರು ಜನರಿಗೆ ಟೆಸ್ಟ್ ಮಾಡಿದರೆ ಒಬ್ಬರು ಅಥವಾ ಇಬ್ಬರಿಗೆ ಪಾಸಿಟಿವ್ ಆಗ್ತಿದೆ. ಉಳಿದ 98 ಜನರಿಗೆ ನೆಗೆಟಿವ್ ಆಗ್ತಿದೆ.
ಬೆಂಗಳೂರಿನಲ್ಲಿ ಕೂಡ ಇಂದು 477 ಕೇಸ್ ದಾಖಲಾಗಿ 07 ಜನ ಕೊರೊನಾಗೆ ಬಲಿಯಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಪಾಸಿಟಿವ್ ಕೇಸ್ ಏರಿಕೆಯಾಗುತ್ತಿರುವುದರಿಂದ ಆತಂಕ ಶುರುವಾಗಿದೆ. ಇಂದು ರಾಜ್ಯದಲ್ಲಿ 1376 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಕೂಡ 154 ಜನ ಡಿಸ್ಚಾರ್ಜ್ ಆಗಿದ್ದಾರೆ. ಜೊತೆಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24,280ಕ್ಕೆ ಏರಿಕೆ ಯಾಗಿದೆ.
ರಾಜ್ಯದಲ್ಲಿ ಇಂದು ಬರೋಬ್ಬರಿ 121021 ಟೆಸ್ಟಿಂಗ್ ಆಗಿದೆ. 121021 ಟೆಸ್ಟಿಂಗ್ ಆಗಿ ಬರೀ 1674 ಕೇಸ್ ದಾಖಲಾಗಿರುವುದು ಸದ್ಯಕ್ಕೆ ಕೊರೊನಾ ಕಂಟ್ರೋಲ್ ನಲ್ಲಿ ಇರುವುದು ಗೊತ್ತಾಗಿದೆ. ಅನ್ಲಾಕ್ ಮಧ್ಯೆ ಮತ್ತೆ ಕೇಸ್ ಏರಿಕೆ ಆಗುವ ಆತಂಕ ಇದ್ದು ಎಚ್ಚರಿಕೆ ವಹಿಸಬೇಕಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 36, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 477, ಬೀದರ್ 0, ಚಾಮರಾಜನಗರ 19, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 61, ಚಿತ್ರದುರ್ಗ 15, ದಕ್ಷಿಣ ಕನ್ನಡ 307, ದಾವಣಗೆರೆ 12, ಧಾರವಾಡ 09, ಗದಗ 3, ಹಾಸನ 104, ಹಾವೇರಿ 01, ಕಲಬುರಗಿ 3, ಕೊಡಗು 94, ಕೋಲಾರ 17, ಕೊಪ್ಪಳ 4, ಮಂಡ್ಯ 44, ಮೈಸೂರು 147, ರಾಯಚೂರು 0, ರಾಮನಗರ 11, ಶಿವಮೊಗ್ಗ 26, ತುಮಕೂರು 80, ಉಡುಪಿ 104, ಉತ್ತರ ಕನ್ನಡ 60, ವಿಜಯಪುರ 04 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇಂದಿನ 03/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/IHsJatrxca @CMofKarnataka @BSBommai @Comm_dhfwka @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/rvVU90VSYU
— K'taka Health Dept (@DHFWKA) August 3, 2021