– ರಾಜ್ಯದ 6 ಜಿಲ್ಲೆಗಳಲ್ಲಿ ಮರಣ ಪ್ರಮಾಣ ಶೂನ್ಯ
ಬೆಂಗಳೂರು: ಮಂಗಳವಾರಕ್ಕೆ ಹೋಲಿಸಿದರೆ ರಾಜ್ಯದಲ್ಲಿಂದು 7,345 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಕೊಂಚ ಪ್ರಮಾಣದಲ್ಲಿ ಏರಿಕೆಯಾಗಿದೆ ಹಾಗೂ 148 ಜನ ಸಾವನ್ನಪ್ಪಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 1,611 ಪ್ರಕರಣಗಳು ದಾಖಲಾಗಿದ್ದು, 19 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 1,68,712 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು 17,913 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ 1,51,566 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ 27,84,355 ಕೊರೊನಾ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನಲ್ಲಿ 1,611 ಜನಕ್ಕೆ ಸೋಂಕು ತಗುಲಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇದುರವರೆಗೂ 15,354 ಜನ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ 79,261 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಬಾಗಲಕೋಟೆ, ಬೀದರ್, ಚಿತ್ರದುರ್ಗ, ಹಾವೇರಿ, ಕಲಬುರಗಿ, ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸಾವುಗಳು ಸಂಭವಿಸಿಲ್ಲ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 47, ಬಳ್ಳಾರಿ 183, ಬೆಳಗಾವಿ 254, ಬೆಂಗಳೂರು ಗ್ರಾಮಾಂತರ 275, ಬೆಂಗಳೂರು ನಗರ 1,611, ಬೀದರ್ 14, ಚಾಮರಾಜನಗರ 97, ಚಿಕ್ಕಬಳ್ಳಾಪುರ 145, ಚಿಕ್ಕಮಗಳೂರು 254, ಚಿತ್ರದುರ್ಗ 95, ದಕ್ಷಿಣ ಕನ್ನಡ 790, ದಾವಣಗೆರೆ 207, ಧಾರವಾಡ 112, ಗದಗ 52, ಹಾಸನ 531, ಹಾವೇರಿ 27, ಕಲಬುರಗಿ 26, ಕೊಡಗು 116, ಕೋಲಾರ 102, ಕೊಪ್ಪಳ 77, ಮಂಡ್ಯ 317, ಮೈಸೂರು 841, ರಾಯಚೂರು 22, ರಾಮನಗರ 58, ಶಿವಮೊಗ್ಗ 262, ತುಮಕೂರು 347, ಉಡುಪಿ 159, ಉತ್ತರ ಕನ್ನಡ 239, ವಿಜಯಪುರ 73 ಮತ್ತು ಯಾದಗಿರಿಯಲ್ಲಿ 12 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಡಿಸೆಂಬರ್ ಒಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಖಚಿತ: ಡಿಸಿಎಂ ಅಶ್ವಥ್ ನಾರಾಯಣ್