ಚೆನ್ನೈ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕಿ ನಳಿನಿ ಶ್ರೀಹರನ್ ಸೋಮವಾರ ರಾತ್ರಿ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ರಾಜೀವ್ ಗಾಂಧಿ ಹತ್ಯೆಯ ಪ್ರಮುಖ ಅಪರಾಧಿಯಾಗಿರುವ ನಳಿನಿ ಕಳೆದ 29 ವರ್ಷಗಳಿಂದ ವೆಲ್ಲೊರು ಮಹಿಳಾ ಜೈಲಿನಲ್ಲಿದ್ದಾಳೆ. ಸದ್ಯ ಈಕೆ ಆತ್ಮಹತ್ಯೆಗೆ ಯತ್ನಿಸಿದ್ದು, ಕಳೆದ 29 ವರ್ಷಗಳಲ್ಲಿ ಆಕೆ ಇದೇ ಮೊದಲ ಬಾರಿಗೆ ಇಂತಹ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿದೆ ಎಂದು ಆಕೆಯ ಪರ ವಕೀಲ ಪುಗಲೆಂತಿ ಮಾಹಿತಿ ನೀಡಿದ್ದಾರೆ.
Advertisement
Advertisement
ಜೈಲಿನಲ್ಲಿ ನಳಿನಿ ಹಾಗೂ ಇನ್ನೊಬ್ಬ ಅಪರಾಧಿ ಮಧ್ಯೆ ಜಗಳ ನಡೆದಿದೆ. ಈ ವಿಚಾರವನ್ನು ಇತರರು ದೊಡ್ಡ ವಿಷಯವನ್ನಾಗಿ ಮಾಡಿದರು. ಪರಿಣಾಮ ನಳಿನಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು ಎಂದು ವಕೀಲರು ವಿವರಿಸಿದರು.
Advertisement
Advertisement
ಇದಕ್ಕೂ ಮೊದಲು ನಳಿನಿ ಯಾವತ್ತೂ ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಹೀಗಾಗಿ ಈ ಸಂಬಂಧ ನಿಜವಾದ ಕಾರಣ ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಪುಗಲೆಂತಿ ಇದೇ ವೇಳೆ ಒತ್ತಾಯಿಸಿದ್ದಾರೆ. ಇತ್ತ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಳಿನಿ ಪತಿ ಮುರುಗನ್ ಜೈಲಿನಿಂದ ವಕೀಲರಿಗೆ ಕರೆ ಮಾಡಿ, ಪತ್ನಿಯನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ನಾನು ಆದಷ್ಟು ಬೇಗ ಕಾನೂನಿನ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
1991ರ ಮೇ 21 ರಂದು ರಾಜೀವ್ ಗಾಂಧಿ ಹತ್ಯೆಯಾಗಿತ್ತು. ತಮಿಳುನಾಡಿನ ಶ್ರೀಪೆರಂಬೂರ್ನಲ್ಲಿ ಚುನಾವಣಾ ಸಮಾವೇಶದ ಸಮಯದಲ್ಲಿ ಎಲ್‍ಟಿಟಿಇ ಸಂಘಟನೆಯ ಆತ್ಮಾಹುತಿ ಬಾಂಬ್ ದಾಳಿಗೆ ಮಾಜಿ ಪ್ರಧಾನಿ ಬಲಿಯಾಗಿದ್ದರು. ಈ ಸಂಬಂಧ ನಳಿನಿ, ಪತಿ ಮುರುಗನ್ ಸೇರಿ 7 ಮಂದಿಯ ಮೇಲೆ ಆರೋಪ ಸಾಬೀತಾಗಿದೆ.