ಹೈದರಾಬಾದ್: ಬಾಹುಬಲಿ ಬಳಿಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್‌ಆರ್‌ಆರ್ ಸಿನಿಮಾ ಇದೇ ವರ್ಷ ಅಕ್ಟೋಬರ್ 13ಕ್ಕೆ ತೆರೆಕಾಣುವುದಾಗಿ ಈಗಾಗಲೇ ಘೋಷಣೆಯಾಗಿದೆ. ಈ ಮಧ್ಯೆ ಚಿತ್ರದ ಗಳಿಕೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಈ ಚಿತ್ರಕ್ಕೆ ಭರ್ಜರಿ ಆಫರ್ ಬಂದಿರುವ ವಿಚಾರವೊಂದು ಬಯಲಾಗಿದೆ.
Advertisement
ಹೌದು. ಐತಿಹಾಸಿಕ ಕಥೆ ಹೊಂದಿರುವ ಆರ್‌ಆರ್‌ಆರ್ ಚಿತ್ರಕ್ಕೆ ಬಿಡುಗಡೆ ಮುಂಚೆಯೇ 350 ಕೋಟಿ ಆಫರ್ ಬಂದಿದೆಯಂತೆ. ರಾಜಮೌಳಿ ಸಿನಿಮಾಗೆ ದಕ್ಷಿಣ ಭಾರತದ ವಿತರಣೆ ಹಕ್ಕು ಖರೀದಿ ಮಾಡಲು ವಿತರಕರು ಮುಂದಾಗಿದ್ದು, 350 ಕೋಟಿ ನೀಡುವುದಾಗಿ ಹೇಳಿದ್ದಾರೆ. ಇದು ತೆಲುಗು ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡಮಟ್ಟದ ವ್ಯವಹಾರವಾಗಿದೆ ಎಂಬುದಾಗಿ ಬಾಲಿವುಡ್ ವೆಬ್‍ಸೈಟ್ ಒಂದು ವರದಿ ಮಾಡಿದೆ.
Advertisement
Advertisement
ಆರ್‌ಆರ್‌ಆರ್ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಹಾಗೂ ವಿತರಣೆ ಹಕ್ಕು ಪಡೆಯಲು 100 ಕೋಟಿ ಡೀಲ್ ಆಗಿದೆಯಂತೆ. ಅನಿಲ್ ತಡಾನಿ (ಎಎಫಿಲಂಸ್) ಈಗಾಗಲೇ ಆರ್‌ಆರ್‌ಆರ್ ಚಿತ್ರದ ವಿತರಣೆ ಹಕ್ಕನ್ನು ತೆಕ್ಕೆಗೆ ಹಾಕಿಕೊಂಡಿರುವುದಾಗಿ ವರದಿಗಳು ತಿಳಿಸಿವೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಒಬ್ಬರೇ ವಿತರಣೆ ಮಾಡಲು ತೀರ್ಮಾನಿಸಿದ್ದಾರೆ. ಬಾಲಿವುಡ್‍ನಲ್ಲಿ ಅನಿಲ್ ತಡಾನಿ ವಿತರಿಸುವ ಸಾಧ್ಯತೆ ಹೆಚ್ಚಿದೆ. ಹೊರದೇಶಗಳಿಂದಲೂ ಆರ್‌ಆರ್‌ಆರ್ ಚಿತ್ರಕ್ಕೆ ಭಾರೀ ಬೇಡಿಕೆಯಿದ್ದು, ಸುಮಾರು 70 ಕೋಟಿ ಡೀಲ್ ಆಗಿರುವುದಾಗಿ ತಿಳಿದುಬಂದಿದೆ.
Advertisement
ಈ ಬಹುನಿರೀಕ್ಷಿತ ಚಿತ್ರದಲ್ಲಿ ತೆಲುಗು ಚಿತ್ರರಂಗದ ಇಬ್ಬರು ಸ್ಟಾರ್ ನಟರಾದ ರಾಮ್ ಚರಣ್, ಜೂನಿಯರ್ ಎನ್‍ಟಿಆರ್ ಒಟ್ಟಿಗೆ ನಟಿಸಿದ್ದಾರೆ. ಅಲ್ಲದೆ ಅಜಯ್ ದೇವ್‍ಗನ್, ಆಲಿಯಾ ಭಟ್, ಸಾಮುತಿಕಾರಣಿ, ಓಲಿವಿಯಾ ಮೋರಿಸ್, ಅಲಿಸನ್ ಡೂಡಿ ಮತ್ತು ರೇ ಸ್ಟೀವನ್‍ಸನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಸದ್ಯ ಗಳಿಕೆಯಲ್ಲಿ ದಾಖಲೆ ಬರೆದಿದ್ದ ಬಾಹುಬಲಿ ಚಿತ್ರಗಳನ್ನು ಆರ್‌ಆರ್‌ಆರ್ ಸಿನಿಮಾ ಮೀರಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಬಾಹುಬಲಿ-2 1,800 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿತ್ತು.