ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ನಮ್ಮವರಲ್ಲ. ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಬಿಜೆಪಿ ಮಾಧ್ಯಮ ಪ್ರಕಟಣೆ:
ರಾಗಿಣಿ ದ್ವಿವೇದಿ ಅವರು ಬಿಜೆಪಿಯ ಸದಸ್ಯರಲ್ಲ. ಬಿಜೆಪಿ ಅವರಿಗೆ ಯಾವುದೇ ಚುನಾವಣೆಯ ಯಾವುದೇ ಕಾರ್ಯಭಾರ ವಹಿಸಿರಲಿಲ್ಲ. ಅವರು ಸ್ವತಃ ತಾವೇ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ರಾಗಿಣಿ ದ್ವಿವೇದಿ ಅವರ ವೈಯಕ್ತಿಕ ಅಥವಾ ವೃತ್ತಿ ಜೀವನದ ಕಾರ್ಯ ಚಟುವಟಿಕೆಗಳಿಗೆ ಬಿಜೆಪಿ ಹೊಣೆಯಾಗುವುದಿಲ್ಲ ಅಥವಾ ಅದಕ್ಕೆ ಉತ್ತರ ನೀಡುವ ಅಗತ್ಯವೂ ಇರುವುದಿಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲ. ನಾವು ಅದರಿಂದ ಅಂತರ ಕಾಯ್ದುಕೊಳ್ಳುತ್ತೇವೆ.
ಬಿಜೆಪಿ ಯಾವುದೇ ವ್ಯಕ್ತಿಯ, ಯಾವುದೇ ಸ್ವರೂಪದ, ಯಾವುದೇ ರೂಪದ ಸಮಾಜಘಾತಕ ಚಟುವಟಿಕೆಗಳಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ. ನಾವು ಎಂದಿಗೂ ಅಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ಅಥವಾ ಬೆಂಬಲ ನೀಡುವದಿಲ್ಲ. ಹೀಗಾಗಿ ರಾಗಿಣಿ ದ್ವಿವೇದಿ ಅವರು ಮಾದಕ ದ್ರವ್ಯ ಜಾಲದಲ್ಲಿ ತೊಡಗಿಕೊಂಡಿದ್ದಾರೆಂಬುದಕ್ಕೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿ ತಿಳಿಸಿದೆ.