ಜೈಪುರ: ರಾಜಸ್ಥಾನದ ಶ್ರೀಗಂಗಾ ನಗರ ಜಿಲ್ಲೆಯ ಅನೂಪಗಢದಲ್ಲಿ ವ್ಯಕ್ತಿಯೋರ್ವ ರಸ್ತೆ ಬದಿ ಕಂಬಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
35 ವರ್ಷದ ಸುಖ್‍ದೇವ್ ಬಾಜೀಗರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇಂದು ಬೆಳಗ್ಗೆ ಸುಖ್‍ದೇವ್ ಶವ ಅನೂಪಗಢ ಬಳಿಯ ಹೆದ್ದಾರಿ ಪಕ್ಕದ ಕಂಬದಲ್ಲಿ ನೇತಾಡುತ್ತಿತ್ತು. ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಖ್‍ದೇವ್ ಜೇಬಿನಲ್ಲಿ ಡೆತ್ ನೋಟ್ ಲಭ್ಯವಾಗಿದೆ.
ಶವದ ಬಳಿ ಡೆತ್‍ನೋಟ್ ಲಭ್ಯವಾಗಿದ್ದು, ಮೃತ ವ್ಯಕ್ತಿ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಬರೆಯಲಾಗಿದೆ. ಸುಖ್‍ದೇವ್ ಪತ್ನಿ ಜೊತೆ ವಾರ್ಡ್-28ರಲ್ಲಿ ವಾಸವಾಗಿದ್ದನು. ಘಟನೆ ಸಂಬಂಧ ಸುಖ್‍ದೇಬ್ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.