ಶಿವಮೊಗ್ಗ: ಅನೇಕ ಮಂದಿ ಮುಖ್ಯಮಂತ್ರಿ ಆಗಿದ್ದರು. ಉಳಿದವರೆಲ್ಲರೂ ಸಹ ಏನು ಸಲಹೆ ಕೊಡಬೇಕೋ ಆ ಸಲಹೆ ಕೊಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ರಸ್ತೆಯಲ್ಲಿ ಹೋಗುವ ಕುಡುಕ ಮಾತನಾಡುವ ರೀತಿಯಲ್ಲಿ ಮಾತನಾಡ್ತಿದ್ದಾರೆ. ವಿರೋಧ ಪಕ್ಷದ ನಾಯಕ ಎಂಬ ಘನತೆ ಮರೆತು, ಮುಖ್ಯಮಂತ್ರಿ ಆಗಿದ್ದೆ ಎಂಬ ಜ್ಞಾನ ಇಲ್ಲದ ಹಾಗೆ ಮಾತನಾಡ್ತಿದ್ದಾರೆ ಎಮದು ಮಾಜಿ ಮುಖ್ಯಮಂತ್ರಿ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಅವರಿಗೆ ಕೋವಿಡ್ ಬಂದ್ರೂ ಆಸ್ಪತ್ರೆಯಲ್ಲಿ ಇದ್ದುಕೊಂಡೆ ಎಲ್ಲಾ ನಿರ್ವಹಣೆ ಮಾಡ್ತಿದ್ದಾರೆ. ಮುಖ್ಯಮಂತ್ರಿ ಅವರನ್ನು, ಸರ್ಕಾರವನ್ನು ಟೀಕೆ ಮಾಡುವ ವಿರೋಧ ಪಕ್ಷದ ನಾಯಕ ಮುಖ್ಯಮಂತ್ರಿ ಆಗಿದ್ರಲ್ಲಾ ಎಂಬುದು ನನಗೆ ನೋವು ಎಂದರು.
ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಆಗೋಕು ಅಯೋಗ್ಯ, ಮುಖ್ಯಮಂತ್ರಿ ಆಗೋದಕ್ಕು ಕೂಡ ಅಯೋಗ್ಯ. ಮುಖ್ಯಮಂತ್ರಿ ಆಗಿದ್ದ ವ್ಯಕ್ತಿ ಅಯೋಗ್ಯ ಎನ್ನೋದಕ್ಕೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಜನ ತೋರಿಸಿದ್ದಾರೆ. ರಾಜ್ಯದ ಜನ ತೀರ್ಮಾನ ಮಾಡಿದರು. ಇವನು ಆಯೋಗ್ಯ, ಇವನ ಕೈಯಲ್ಲಿ ಸರ್ಕಾರ ಕೊಟ್ಟರೆ ಉಪಯೋಗ ಇಲ್ಲ. ಇದಕ್ಕಾಗಿ ಅವನಿಗೆ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಬಿಸಾಕಿದರು ಎಂದು ಟೀಕಿಸಿದರು.
ಚಾಮುಂಡೇಶ್ವರಿಯಲ್ಲು ಸೋಲಿಸಿದರು. ಈಗ ಆ ಜ್ಞಾನನೂ ಇಲ್ಲದ ಹಾಗೆ ಮುಖ್ಯಮಂತ್ರಿ ಅವರನ್ನು ಟೀಕೆ ಮಾಡ್ತಾರೆ. ಸರ್ಕಾರವನ್ನು ಟೀಕೆ ಮಾಡ್ತಾರೆ. ಸರ್ಕಾರ ಐಸಿಯುನಲ್ಲಿದೆ ಅಂದ್ರೆ ಅರ್ಥ ಏನು..? ಸಿದ್ದರಾಮಯ್ಯ ಅವರಿಗೆ ತಲೆ ಕೆಟ್ಟು ಹನ್ನೆರಡು ಹೆಣ ಆಗಿದೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ದಿನದಿಂದ ನಾನು ಜೀವಂತವಾಗಿ ಇದ್ದೇನೆ ಎಂದು ತೋರಿಸಲು ಏನಾದ್ರೂ ಹೇಳಿಕೆ ಕೊಟ್ಟು ಟೀಕೆ ಮಾಡೋದೆ ಅವರ ಕೆಲಸ ಆಗಿದೆ. ಮುಖ್ಯಮಂತ್ರಿ ಅವರಿಗೆ ಕೋವಿಡ್ ಬಂದಿದೆ ಎಂದು ಆಸ್ಪತ್ರೆಯಲ್ಲಿ ಇದ್ದಾರೆ. ಆದರೆ ಈ ಮನುಷ್ಯ ಆಗಲೂ ಟೀಕೆ ಮಾಡ್ತಾರೆ ಎಂದು ಕಿಡಿಕಾರಿದರು.