– ರೈಲ್ವೇಯಲ್ಲಿ ಖಾಸಗಿ ಬಂಡವಾಳ ಹೂಡಿಕೆ ಅನಿವಾರ್ಯ
ನವದೆಹಲಿ: ರಸ್ತೆಗಳು ರಾಷ್ಟ್ರದ ಸಂಪನ್ಮೂಲಗಳಲ್ಲಿ ಒಂದು. ಅಲ್ಲಿ ಖಾಸಗಿ ವಾಹನಗಳು ಓಡಾಡುವದಿಲ್ವಾ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿಪಕ್ಷಗಳನ್ನ ಪ್ರಶ್ನಿಸಿ, ಖಾಸಗೀಕರಣವನ್ನ ಸಮರ್ಥಿಸಿಕೊಂಡಿದ್ದಾರೆ.
ರೈಲ್ವೇ ಖಾಸಗೀಕರಣ ಸಂಬಂಧ ವಿಪಕ್ಷಗಳು ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡು ಕೆಲ ಆರೋಪಗಳನ್ನ ಮಾಡಿದ್ದವು. ಈ ಸಂಬಂಧ ಲೋಕಸಭೆಯಲ್ಲಿ ವಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಪಿಯೂಷ್ ಗೋಯಲ್, ದೇಶದ ಸಂಪನ್ಮೂಲವಾಗಿರುವ ರಸ್ತೆಗಳಲ್ಲಿ ಸರ್ಕಾರಿ ವಾಹನಗಳು ಮಾತ್ರ ಸಂಚರಿಸಬೇಕೆಂದು ಏಕೆ ಯಾರು ಹೇಳುತ್ತಿಲ್ಲ. ಖಾಸಗಿ ಮತ್ತು ಸರ್ಕಾರಿ ವಾಹನಗಳು ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದರು.
Advertisement
Advertisement
ರೈಲ್ವೇ ಸಂಪನ್ಮೂಲ ಸರ್ಕಾರದಲ್ಲಿಯೇ ಇರಲಿದೆ. ಅದರ ಒಡೆತನವೂ ಸರ್ಕಾರ ಬಳಿಯಲ್ಲಿರಲಿದೆ. ಇದರಲ್ಲಿ ಖಾಸಗಿ ಬಂಡವಾಳ ಹೂಡಿಕೆಯಾದ್ರೆ ಏನು ಸಮಸ್ಯೆ ಎಂದು ವಿಪಕ್ಷಗಳನ್ನ ಪ್ರಶ್ನೆ ಮಾಡಿದರು. ಇಂದು ರೈಲ್ವೇ ನಿಲ್ದಾಣಗಳಲ್ಲಿ ವೇಟಿಂಗ್ ರೂಮ್, ಎಕ್ಸಲೇಟರ್ ಸೇರಿದಂತೆ ಹಲವು ಸೌಲಭ್ಯಗಳನ್ನ ಪ್ರಯಾಣಿಕರು ಬಯಸುತ್ತಾರೆ. ಹಾಗಾಗಿ ರೈಲ್ವೇಯಲ್ಲಿ ಖಾಸಗಿ ಬಂಡವಾಳ ಹೂಡಿಕೆ ಅನಿವಾರ್ಯ. ಅತ್ಯಾಧುನಿಕ, ಸುಧಾರಿತ ಸೌಲಭ್ಯಗಳನ್ನೊಳಗೊಂಡ ನಿಲ್ದಾಣಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ 50 ರೈಲ್ವೇ ನಿಲ್ದಾಣಗಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರತದ ಮೊದಲ ಎಸಿ ರೈಲ್ವೆ ನಿಲ್ದಾಣ
Advertisement
Advertisement
ಸದ್ಯ 44 ವಂದೇ ಭಾರತ್ ರೈಲುಗಳು ಚಲಿಸುತ್ತಿದ್ದು, ಇವುಗಳ ಖಾಸಗೀಕರಣದ ಆದೇಶ ನೀಡಲಾಗಿದೆ. ಶೀಘ್ರದಲ್ಲಿಯೇ ಈ ರೈಲುಗಳು ಮಾರ್ಗ ನಿಗಧಿಪಡಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಸೇವೆ ಸಹ ನೀಡುವ ಮಾಹಿತಿಯನ್ನ ಗೋಯಲ್ ನೀಡಿದರು. ಇದನ್ನೂ ಓದಿ: ಒಂದು ಹನಿ ನೀರು ಹೊರ ಬೀಳಲ್ಲ – ಮೈಸೂರು, ಬೆಂಗಳೂರು ಹಳಿ ನಿರ್ವಹಣೆಗೆ ಗೋಯಲ್ ಮೆಚ್ಚುಗೆ
We're accused of privatizing Railways, but people never say that only govt vehicles should run on roads, it's so because both pvt&govt vehicles help economically. Pvt investment in Railways should we welcomed as it'll improve services: Railway Minister Piyush Goyal in Lok Sabha pic.twitter.com/WCiMalPLnV
— ANI (@ANI) March 16, 2021
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಕೇಂದ್ರದ ಖಾಸಗೀಕರನ ನೀತಿಯನ್ನ ಖಂಡಿಸಿವೆ. ರೈಲ್ವೇ ಮಾತ್ರವಲ್ಲದೇ ಬ್ಯಾಂಕುಗಳನ್ನ ಸಹ ಖಾಸಗೀಕರಣ ಮಾಡಲಾಗುತ್ತಿದ ಎಂದು ಆರೋಪಿಸಿವೆ. ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.