– 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದ ರೆಡ್ ಆರ್ಮಿ
ಅಬುಧಾಬಿ: ಇಂದು ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್‍ಗಳ ಭಾರೀ ಅಂತರದಿಂದ ಗೆದ್ದು, ರನ್ ರೇಟಿನಲ್ಲಿ ಚೇತರಿಕೆ ಕಂಡಿದೆ.
ಇಂದು ಅಬುಧಾಬಿ ಮೈದಾನದಲ್ಲಿ ನಡೆದ ಐಪಿಎಲ್-2020ಯ 39ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಬೆಂಗಳೂರು ಬೌಲರ್ ಗಳ ಮಾರಕ ದಾಳಿಗೆ ತತ್ತರಸಿ ನಿಗದಿತ 20 ಓವರಿನಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 84 ರನ್ ಪೇರಿಸಿತು. ಈ ಸುಲಭ ಗುರುಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಇನ್ನೂ 6.3 ಓವರ್ ಬಾಕಿ ಇರುವಂತೆ 8 ವಿಕೆಟ್‍ಗಳ ಅಂತರದಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ.
Advertisement
That's a BIG WIN for #RCB here in Abu Dhabi as they beat #KKR by 8 wickets.#Dream11IPL pic.twitter.com/qgNXRFpzYE
— IndianPremierLeague (@IPL) October 21, 2020
Advertisement
ರನ್ ರೇಟ್ ಜಿಗಿತ
ಪಂದ್ಯಗಳನ್ನು ಗೆಲ್ಲುತ್ತಾ ಬಂದಿದ್ದರು ಬೆಂಗಳೂರು ತಂಡ ಭಾರೀ ಅಂತರದ ಸೋಲು ಮತ್ತು ಆಲೌಟ್ ಆಗಿ ರನ್‍ರೇಟಿನಲ್ಲಿ ಕೊಂಚ ಕೆಳಗೆ ಇತ್ತು. ಈ ಪಂದ್ಯಕ್ಕೂ ಮುನ್ನ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು, ಮೂರರಲ್ಲಿ ಸೋತಿದ್ದ ಕೊಹ್ಲಿ ಪಡೆ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು. ರನ್ ರೇಟ್ -0.096 ಇತ್ತು. ಆದರೆ ಇಂದು ಭಾರೀ ಅಂತರದಲ್ಲಿ ಗೆದ್ದ ಕಾರಣ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಹೋಗುವ ಮೂಲಕ, +0.182 ರನ್‍ರೇಟ್ ಪಡೆದುಕೊಂಡಿದೆ.
Advertisement
Advertisement
ಕೋಲ್ಕತ್ತಾ ಕೊಟ್ಟ 85 ರನ್‍ಗಳ ಕಡಿಮೆ ಗುರಿಯನ್ನು ಬ್ನೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭಿಕರಾದ ದೇವದತ್ ಪಡಿಕ್ಕಲ್ ಮತ್ತು ಆರೋನ್ ಫಿಂಚ್ ಉತ್ತಮ ಆರಂಭ ನೀಡಿದರು. ಪವರ್ ಪ್ಲೇ ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಈ ಜೋಡಿ ಆರು ಓವರ್ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಳ್ಳದೇ 44 ರನ್ ಸೇರಿಸಿತು. ನಂತರ 6ನೇ ಓವರ್ ಎರಡನೇ ಬಾಲಿನಲ್ಲಿ 16 ರನ್ ಗಳಿಸಿದ್ದ ಫಿಂಚ್ ಅವರು ಔಟ್ ಆದರು.
At the end of the powerplay, #RCB are 44/0
Live – https://t.co/XUEBCQIfuL #Dream11IPL pic.twitter.com/hltbCp7M83
— IndianPremierLeague (@IPL) October 21, 2020
ಫಿಂಚ್ ನಂತರ 17 ಬಾಲಿಗೆ 25 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ದೇವದತ್ ಪಡಿಕ್ಕಲ್ ಅವರು ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ನಂತರ ಒಂದಾದ ನಾಯಕ ವಿರಾಟ್ ಕೊಹ್ಲಿ ಮತ್ತು ಗುರ್ಕೀರತ್ ಸಿಂಗ್ ಮನ್ ಆರ್‌ಸಿಬಿಯನ್ನು ಗೆಲುವಿನ ದಡ ಸೇರಿಸಿದರು. ಇದರಲ್ಲಿ ಕೊಹ್ಲಿ 17 ಬಾಲಿಗೆ 18 ರನ್ ಹೊಡೆದರೆ, ಗುರ್ಕೀರತ್ 26 ಬಾಲಿಗೆ 21 ರನ್ ಹೊಡೆದರು. ಈ ಮೂಲಕ ಬೆಂಗಳೂರು ತಂಡ 8 ವಿಕೆಟ್‍ಗಳ ಜಯ ಸಾಧಿಸಿತು.
Innings Break!
Brilliant bowling effort by #RCB restricts #KKR to a total of 84/8 (Siraj 3/8, Chahal 2/15).#RCB need 85 runs to win.
Scorecard – https://t.co/XUEBCQIfuL #Dream11IPL pic.twitter.com/iJgxbMWryc
— IndianPremierLeague (@IPL) October 21, 2020
ಆರ್‌ಸಿಬಿ ಬೌಲರ್‌ಗಳ ದಾಖಲೆ: ಇಂದಿನ ಪಂದ್ಯದಲ್ಲಿ ಅದ್ಭುತವಾಗಿ ಬೌಲ್ ಮಾಡಿದ ವೇಗಿ ಮೊಹಮ್ಮದ್ ಸಿರಾಜ್ ಅವರು ಎರಡು ಓವರ್ ಬೌಲ್ ಮಾಡಿ ಒಂದು ರನ್ ನೀಡದೇ ಮೇಡನ್ ಮಾಡಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ಐಪಿಎಲ್‍ನ ಒಂದೇ ಪಂದ್ಯದಲ್ಲಿ ಎರಡು ಮೇಡನ್ ಓವರ್ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇವರ ಜೊತೆಗೆ ಐದನೇ ಓವರ್ ಅನ್ನು ಕೂಡ ಕ್ರಿಸ್ ಮೋರಿಸ್ ಮೇಡನ್ ಮಾಡಿದರು. ನಂತರ 12ನೇ ಓವರ್ ಅನ್ನು ವಾಷಿಂಗ್ಟನ್ ಸುಂದರ್ ಅವರು ಮೇಡನ್ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಮೇಡನ್ ಓವರ್ ಮಾಡಿದ ತಂಡ ಎಂಬ ಹೆಗ್ಗಳಿಕೆ ಆರ್‍ಸಿಬಿ ಪಾತ್ರವಾಗಿದೆ.
The many moods of #RCB Skipper, @imVkohli #Dream11IPL pic.twitter.com/dNyQXkpd8U
— IndianPremierLeague (@IPL) October 21, 2020
ಭರ್ಜರಿ ಬೌಲಿಂಗ್: ಇಂದಿನ ಪಂದ್ಯದಲ್ಲಿ ಆರ್‍ಸಿಬಿ ತಂಡದ ಎಲ್ಲ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಇಂದು ಸೂಪರ್ ಆಗಿ ಬೌಲ್ ಮಾಡಿದ ಮೊಹಮ್ಮದ್ ಸಿರಾಜ್ ಅವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದು ಕೇವಲ ಎಂಟು ರನ್ ನೀಡಿದರು. ಜೊತೆಗೆ ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಯುಜ್ವೇಂದ್ರ ಚಹಲ್ ಅವರು ಎರಡು ವಿಕೆಟ್ ಕಿತ್ತು ಕೇವಲ 15 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದು ಮಿಂಚಿದರು.