ರಘು ಕೂದಲು ಉದುರಿದ್ಯಾಕೆ? ಲ್ಯಾಗ್ ಮಂಜು ತರಲೆ ಉತ್ತರ

Public TV
1 Min Read
Lag Manju Raghu

ಬಿಗ್‍ಬಾಸ್ ಸೀಸನ್ 8ರ ಮೂರನೇ ವಾರದಲ್ಲಿ ಸ್ಪರ್ಧಿಗಳ ನಿಜವಾದ ಮುಖ ಪ್ರೇಕ್ಷಕರ ಮುಂದೆ ಬರ್ತಿದೆ. ನಿನ್ನೆ ಎಪಿಸೋಡ್ ನಲ್ಲಿ ಸಂಬರಗಿ ಕಣ್ಣೀರು, ಶುಭಾ ಮುನಿಸು, ಗೀತಾ ಲೆಕ್ಕಾಚಾರದ ಆಟ, ಮಂಜನ ಕಾಮಿಡಿ ನಡುವೆ ದೇಸಿ ಗೇಮ್, ಚಂದ್ರಕಲಾ ಮತ್ತು ಶಂಕರ್ ಅಶ್ವಥ್ ಸೇಫ್ ಜೋನ್ ಹೀಗೆ ಒಂದೊಂದು ಗುಣಗಳು ನೋಡಲು ಸಿಗುತ್ತಿವೆ. ಇಂದು ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ರಘು ಕೂದಲು ಉದುರಿದ್ಯಾಕೆ ಅಂತ ಮಂಜು ಹೇಳಿದ್ದಾರೆ.

Bigg boss 2 4

ಹಾಲ್ ನಲ್ಲಿ ಮಂಜು, ಅರವಿಂದ್, ರಘು, ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ ಕುಳಿತಿದ್ದರು. ದಿವ್ಯಾ ಸುರೇಶ್ ಮುಂದೆ ನಾನು ಸುಳ್ಳು ಹೇಳುವ ರೀತಿ ಕಾಣಬಹುದು. ಆದ್ರೆ ಸುಳ್ಳು ಹೇಳ್ತೀನಾ ಅಂತ ರಘು ಹೇಳಿದ್ರು. ರಘು ಮಾತು ಕೇಳಿದ ಅರವಿಂದ್ ನಗಲಾರಂಭಿಸಿದರು. ಅಲ್ಲಿಯೇ ಕುಳಿತಿದ್ದ ಮಂಜು, ಇಷ್ಟು ವರ್ಷದಲ್ಲಿ ರಘು ಇದುವರೆಗೂ ನಿಜನಾ ಹೇಳಿಲ್ಲ ಅನ್ನೋದು ನನ್ನ ಅನಿಸಿಕೆ. ನಿಜ ಹೇಳಿದ್ರೆ ಕೂದಲು ಜೋರಾಗಿ ಬೆಳೆದಿರೋದು ಅಂತ ಕಾಲೆಳೆದರು.

Bigg boss 1 9

ಸುಳ್ಳು ಹೇಳೋರಿಗೆ ಹೆಚ್ಚು ಕೂದಲು ಉದುರೋದು. ಬೇಕಿದ್ರೆ ನಮ್ಮ ಮಾವ ಸಂಬರಗಿಯನ್ನ ಕೇಳು. ಸೆಕ್ಷನ್ 56ರ ಪ್ರಕಾರ ಕೂದಲು ಉದುರೋದೇ ಸುಳ್ಳು ಹೇಳಲು ಅಂತ ಹೇಳ್ತಾರೆ. ಬೇಕಿದ್ರೆ ಕರಿ ಗೊಂಬೆ ಮತ್ತು ರಘುನನ್ನ ನೋಡಿ ಅಂತ ಹೇಳಿ ಹಾಲ್ ನಲ್ಲಿ ಕುಳಿತಿದ್ದ ಎಲ್ಲರನ್ನ ನಗಿಸಿದರು.

ಈ ವಾರ ಜೋಡಿಯಾಗಿ ಟಾಸ್ಕ್ ನೀಡಿರುವ ಬಿಗ್‍ಬಾಸ್ ಎಲ್ಲರಿಗೂ ರಿಚಾರ್ಜ್ ಸ್ಟಿಕ್ ನೀಡಿದ್ದಾರೆ. ಅದನ್ನ ಕಾಪಾಡಿಕೊಳ್ಳುವದರ ಜೊತೆಗೆ ಬೇರೆಯವರ ಸ್ಟಿಕ್ ಪಡೆದುಕೊಂಡ ಜೋಡಿ ವಿನ್ ಆಗಲಿದೆ. ಹಾಗಾಗಿಯೇ ಎಲ್ಲರೂ ಬೇರೆಯವರ ರಿಚಾರ್ಜ್ ಸ್ಟಿಕ್ ಹುಡುಕೋದರಲ್ಲಿ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *